More

    ಒಂದು ತಿಂಗಳ ನಂತರ ಅನುಷ್ಕಾಶರ್ಮಾ ಪೋಸ್ಟ್!

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ಸಾಮಾಜಿಕ ಮಾಧ್ಯಮಕ್ಕೆ ಮರಳಿದ್ದಾರೆ. ಮಗ ಅಕಾಯ್ ಜನಿಸಿದ ಒಂದು ತಿಂಗಳ ನಂತರ ತನ್ನ ಇನ್​ಸ್ಟಾಗ್ರಾಮ್​ ಹ್ಯಾಂಡಲ್‌ನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದಾರೆ. ಅನುಷ್ಕಾ ಕೊನೆಯ ಪೋಸ್ಟ್ ತನ್ನ ಪುತ್ರನ ಜನನದ ಘೋಷಣೆನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಹಾಕಿದ್ದಾಗಿತ್ತು.

    ಇದನ್ನೂ ಓದಿ: ನಡು ರಸ್ತೇಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಕಾದಿತ್ತು ಬಿಗ್​ಶಾಕ್!

    ಅನುಷ್ಕಾ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ಹೋಳಿ ಶುಭಾಶಯಗಳನ್ನು ಕೋರಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಬಣ್ಣಗಳೊಂದಿಗೆ ಬರೆಯಲಾದ ‘ಹ್ಯಾಪಿ ಹೋಳಿ’ ಟ್ಯಾಗ್​ನೊಂದಿಗೆ ಫೋಟೋ ಹಾಕಲಾಗಿದೆ.

    ಫೆಬ್ರುವರಿ 20 ರಂದು ಅನುಷ್ಕಾ ತನ್ನ ಎರಡನೇ ಮಗುವಿನ ಜನನವನ್ನು ಘೋಷಿಸಿದಾಗ ಅದೇ ಆಕೆಯ ಇನ್​ಸ್ಟಾಗ್ರಾಮ್​ನಲ್ಲಿ ಕೊನೆಯ ಪೋಸ್ಟ್ ಆಗಿತ್ತು. “ಸಮೃದ್ಧ, ಸಂತೋಷ ಮತ್ತು ಪ್ರೀತಿಯಿಂದ ನಮ್ಮ ಹೃದಯವು ತುಂಬಿದೆ. ಫೆಬ್ರವರಿ 15 ರಂದು ನಾವು ನಮ್ಮ ಅಕಾಯ್ ನನ್ನು ಈ ಜಗತ್ತಿಗೆ ಸ್ವಾಗತಿಸಿದೆವು. ಅವನು ವಾಮಿಕಾಳ ಚಿಕ್ಕ ಸಹೋದರ ಎಂದು ಎಲ್ಲರಿಗೂ ತಿಳಿಸಲು ಸಂತೋಷಪಡುತ್ತೇವೆ” ಎಂದು ಬರೆದುಕೊಂಡಿದ್ದರು.

    “ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಪರ್ಸನಲ್​ ವಿಷಯವನ್ನು ದಯೆ ಮಾಡಿ ಗೌರವಿಸುವಂತೆ ನಾವು ವಿನಂತಿಸುತ್ತೇವೆ” ಎಂದು ಅನುಷ್ಕಾ ಟಿಪ್ಪಣಿ ಸೇರಿಸಿದ್ದಾರೆ.

    ‘ನನ್ನನ್ನೂ ಬ್ಲೂ ಫಿಲಂ ಕೇಸ್​ನಲ್ಲಿ ಸಿಕ್ಕಿಸಲಾಗಿತ್ತು’: ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ ಹಿರಿಯ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts