ವರಲಕ್ಷ್ಮೀಶರತ್‌ಕುಮಾರ್ ಮದುವೆ..! ವರಯಾರು? ಮದುವೆ ಎಲ್ಲಿ ಗೊತ್ತಾ?

varu
Published on

ಚೆನ್ನೈ: ವರಲಕ್ಷ್ಮಿ ಶರತಕುಮಾರ್ ನಾಯಕಿಯಾಗಿ ಮಾತ್ರವಲ್ಲದೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅವರು ತೆಲುಗು ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಕೆ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

ವರಲಕ್ಷ್ಮೀ ಗೆಳೆಯ ನಿಕೊಲಾಯ್ ಸಚ್ ದೇವ್ ಜೊತೆ ಏಳು ಹೆಜ್ಜೆ ಇಡಲಿದ್ದಾರೆ. ಅವರು ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಜುಲೈ 2 ರಂದು ಥಾಯ್ಲೆಂಡ್ ನಲ್ಲಿ ಮದುವೆ ನಡೆಯಲಿದೆ ಎಂದು ಕಾಲಿವುಡ್ ನಲ್ಲಿ ಹೇಳಲಾಗುತ್ತಿದೆ.

ಇನ್ನು ಮದುವೆ ಕೆಲಸ, ಮತ್ತು ಆಮಂತ್ರಣ ಈಗಾಗಲೇ ಪ್ರಾರಂಭವಾಗಿದೆ. ಲಗ್ನಪತ್ರಿಕೆಗಳ ವಿತರಣೆ ಆರಂಭವಾಗಿದೆ. ಗುರುವಾರ (ಜೂನ್ 6) ತಮ್ಮ ಕುಟುಂಬದೊಂದಿಗೆ ತಮ್ಮ ಮದುವೆಯಲ್ಲಿ ಪಾಲ್ಗೊಳ್ಳುವಂತೆ ಹಿರಿಯ ನಟ ರಜನಿಕಾಂತ್ ಅವರನ್ನು ಆಹ್ವಾನಿಸಿದ್ದಾರೆ.

ಅವರು ರಜನಿಕಾಂತ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾನು ತಲೈವಾ ಸರ್ ಮತ್ತು ಲತಾ ಆಂಟಿಯನ್ನು ಒಟ್ಟಿಗೆ ಮದುವೆಗೆ ಆಹ್ವಾನಿಸಿದೆ. ತುಂಬಾ ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದಗಳು ಸರ್. ಐಶ್ವರ್ಯಾ ರಜನಿಕಾಂತ್.. ಎಂದಿನಂತೆ ತುಂಬಾ ಪ್ರೀತಿಯಿಂದ ನನ್ನೊಂದಿಗೆ ಮಾತನಾಡಿದ್ದೀರಿ ಎಂದು ವರಲಕ್ಷ್ಮಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ರಜನಿಕಾಂತ್ ದಂಪತಿಯೊಂದಿಗೆ ವರಲಕ್ಷ್ಮೀ ಅವರ ಪಾಲಕರಾದ ರಾಧಿಕಾ - ಶರತ್‌ಕುಮಾರ್ ಫೋಟೋದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net