ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ಜನಸೇನಾ ನಾಯಕ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಿದ್ದಾರೆ. ತೆಲುಗು ದೇಶಂ (ಟಿಡಿಪಿ), ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟವು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಮೂಲಕ ಶುಭ ಕೋರಿದ್ದಾರೆ.
ಇದನ್ನೂ ಓದಿ: ಮೋದಿ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್: ದಿನ? ಸಮಯ ವಿವರ ಇಲ್ಲಿದೆ ನೋಡಿ..
ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು ಅವರಿಗೆ ಜೂನ್ 4 ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಶುಭ ಕೋರಿದ್ದ ಕಮಲ್ ಹಾಸನ್, ಶುಕ್ರವಾರ ಎಕ್ಸ್ ವೇದಿಕೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಿದ್ದಾರೆ.
ಪವನ್ ಕಲ್ಯಾಣ್ ಅವರೊಂದಿಗೆ ಭಾವನಾತ್ಮಕ ಸಂಭಾಷಣೆಯ ನಂತರ, ನಾನು ನನ್ನ ಶುಭಾಶಯಗಳನ್ನು ತಿಳಿಸಿದ್ದೇನೆ. ಆಂಧ್ರಪ್ರದೇಶದ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಈ ಪ್ರಯಾಣವನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ಅವರಿಗೆ ಶುಭ ಹಾರೈಸಿದೆ. ನಿಮ್ಮ ಬಗ್ಗೆ ಹೆಮ್ಮೆ ಇದೆ ಬ್ರೋ!” ಎಂದು ಕಮಲ್ ಹಾಸನ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕಮಲ್ ಹಾಸನ್ ಟ್ವೀಟ್ ಗೆ ಪವನ್ ಕಲ್ಯಾಣ್ ಹಾಗೂ ಜನಸೇನಾ ಅಭಿಮಾನಿಗಳು ಧನ್ಯವಾದ ಸರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಕಮಲ್ ಹಾಸನ್ ಟ್ವೀಟ್ ವೈರಲ್ ಆಗುತ್ತಿದೆ.