ಇದು ಮೋದಿ ಯುದ್ಧ; ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಭಾರತದ ಪರೋಕ್ಷ ನೆರವು ಕಾರಣ ಎಂದ ಅಮೆರಿಕಾ ವಾಣಿಜ್ಯ ಸಲಹೆಗಾರ ನವಾರೊ | US Tariffs

Peter Navarro
Published on

US Tariffs: ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50 ರಷ್ಟು ಸುಂಕ ವಿಧಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ, ರಷ್ಯಾ-ಉಕ್ರೇನ್ ಸಂಘರ್ಷವನ್ನು ಮೋದಿಯ ಯುದ್ಧ ಎಂದು ಕರೆದಿದ್ದಾರೆ.

ಬ್ಲೂಮ್‌ಬರ್ಗ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನವರೋ, ಭಾರತ ರಷ್ಯಾದಿಂದ ನಿರಂತರವಾಗಿ ಇಂಧನ ಖರೀದಿ ಮಾಡುತ್ತಿರುವುದರಿಂದ ರಷ್ಯಾಗೆ ಪರೋಕ್ಷ ಹಣಕಾಸಿನ ನೆರವು ನೀಡಿದಂತಾಗುತ್ತಿದೆ, ರಷ್ಯಾದೊಂದಿಗಿನ ವ್ಯಾಪಾರವನ್ನು ನಿಲ್ಲಿಸುವಂತೆ ಭಾರತಕ್ಕೆ ಸಂದೇಶ ಕಳುಹಿಸಿದ ನವರೊ, ಭಾರತ ಮಾಸ್ಕೋದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿದರೆ ಅಮೆರಿಕದ ವಿಧಿಸಿರುವ ಸುಂಕದಲ್ಲಿ ಶೇ.25 ರಷ್ಟು ಕಡಿತವಾಗುವ ಸಾಧ್ಯತೆ ಇದೆ ಎಂದರು.

ಭಾರತದ ಈ ರೀತಿಯ ಕೆಲಸಗಳಿಂದ ಅಮೆರಿಕದಲ್ಲಿ ಎಲ್ಲರಿಗೂ ನಷ್ಟ ಅನುಭವಿಸುತ್ತಿದ್ದು, ಅನೇಕರು ಕೆಲಸ ಕಳೆದುಕೊಳ್ಳುತಿದ್ದಾರೆ, ರಷ್ಯಾ-ಉಕ್ರೇನ್ ನಡುವಿನ ಶಾಂತಿಯ ಮಾರ್ಗ ದೆಹಲಿಯ ಮೂಲಕ ಹಾದುಹೋಗುತ್ತದೆ ಎಂದರು.

ಅದೇ ರೀತಿ ವರ್ತಿಸಿ

ನಮ್ಮ ಸಾರ್ವಭೌಮತ್ವ ರಾಷ್ಟ್ರ, ನಾವು ಯಾರಿಂದ ಬೇಕಾದರೂ ತೈಲವನ್ನು ಖರೀದಿಸಬಹುದು ಎಂದು ಹೇಳಿಕೊಳ್ಳುವ ಭಾರತೀಯರು ದುರಹಂಕಾರದಿಂದ ಮಾತನಾಡುತ್ತಿದ್ದು, ನೀವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಲ್ಲವೇ ಅದೇ ರೀತಿ ವರ್ತಿಸಿ ಎಂದರು.

ಭಾರತ ಮತ್ತು ಅಮೆರಿಕಾ ನಡುವೆ ತಿಂಗಳುಗಳ ಕಾಲ ನಡೆದ ಮಾತುಕತೆಗಳ ಹೊರತಾಗಿಯೂ, ಭಾರತದ ಮೇಲೆ ದಂಡನಾತ್ಮಕ ರೂಪದ ಸುಂಕಗಳನ್ನು ವಿಧಿಸಿದ್ದು. ಟ್ರಂಪ್ ತಂಡದೊಂದಿಗೆ ಸುಂಕ ಮಾತುಕತೆಗೆ ಪ್ರವೇಶಿಸಿದ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದರು ಅಂತಿಮವಾಗಿ ಎರಡೂ ರಾಷ್ಟ್ರಗಳು ಇಲ್ಲಿಯವರೆಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.

ಟ್ರಂಪ್ ಸುಂಕ

ಭಾರತೀಯ ಸರಕುಗಳ ಮೇಲೆ ಟ್ರಂಪ್ ಅವರ ಶೇ.50 ರಷ್ಟು ಸುಂಕ ಬುಧವಾರ (ಆಗಸ್ಟ್​​​ 27) ಜಾರಿಗೆ ಬಂದ ನಂತರ ಈ ಹೇಳಿಕೆಗಳು ಹೊರಬಿದ್ದಿದ್ದು. ಇದು ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿರುವುದರ ಪ್ರತಿಫಲ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್​ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ವಿಧಿಸಲಾಗಿದ್ದ ಶೇ.25 ರಷ್ಟು ಯುಎಸ್ ಸುಂಕ ಸದ್ಯ ಶೇ 50 ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net