ಅಮೆರಿಕಾದಿಂದ ಸುಂಕ ಹೆಚ್ಚಳ; ದೇಶವನ್ನು ರಕ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ! | Mallikarjun Kharge

Mallikarjun Kharge
Published on

Mallikarjun Kharge: ಭಾರತದ ರಫ್ತಿನ ಮೇಲೆ ಅಮೆರಿಕ ಶೇ.50 ರಷ್ಟು ಸುಂಕ ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶವನ್ನು ರಕ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಖರ್ಗೆ, ಪ್ರಧಾನಿ ಮೋದಿ ನಗು, ಅಪ್ಪುಗೆ ಮತ್ತು ಸೆಲ್ಫಿಗಳ ಬದಲು ಪರಿಣಾಮಕಾರಿ ವಿದೇಶಾಂಗ ನೀತಿಗಳತ್ತ ಗಮನಹರಿಸಿ ಎಂದು ಖರ್ಗೆ ಸಲಹೆ ನೀಡಿದ್ದು, ಇಂದಿನಿಂದ 'ಅಬ್ಕಿ ಬಾರ್, ಟ್ರಂಪ್ ಸರ್ಕಾರ್, ಅಮೆರಿಕಾ ಭಾರತದ ಮೇಲೆ 50% ಸುಂಕವನ್ನು ವಿಧಿಸಿದೆ. ಈ ಸುಂಕದ ಮೊದಲ ಆಘಾತವಾಗಿ ನಾವು 10 ವಲಯಗಳಲ್ಲಿ ಅಂದಾಜು 2.17 ಲಕ್ಷ ಕೋಟಿ ನಷ್ಟ ಅನುಭವಿಸುತ್ತೇವೆ ಎಂದು ಖರ್ಗೆ ತಿಳಿಸಿದ್ದಾರೆ.

ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ನಡುವೆ ರೈತರ ಹಿತಾಸಕ್ತಿಗಳನ್ನು ಕಾಪಾಡುವ ಬಗ್ಗೆ ಮೋದಿ ನೀಡಿದ್ದ ಭರವಸೆಗಳನ್ನು ಉಲ್ಲೇಖಿಸಿದ ಖರ್ಗೆ, ಸುಂಕಗಳಿಂದ ಹೆಚ್ಚು ದುಷ್ಪರಿಣಾಮ ಬೀರುತ್ತಿರುವುದು ರೈತರ ಮೇಲೆ. ಅವರ ಹಿತಾಸಕ್ತಿ ಕಾಪಾಡುವ ಮಾತನಾಡಿದ್ದ ಮೋದಿ ಭರವಸೆ ವಿಫಲವಾಗಿದೆ ಎಂದರು.

ಜವಳಿ ವಲಯವು ಅತ್ಯಂತ ಕಠಿಣ ಪರಿಣಾಮ ಎದುರಿಸುತ್ತಿದ್ದು, ಅಂದಾಜು 5,00,000 ಉದ್ಯೋಗಿಗಳ ಅತಂತ್ರರಾಗಿದ್ದಾರೆ. ಇದಷ್ಟೆ ಅಲ್ಲದೇ ರತ್ನ ಮತ್ತು ಆಭರಣದಂತಹ ಉದ್ಯಮಕ್ಕೂ ಹೊಡೆತ ಬಿದ್ದಿದೆ ಎಂದರು.

ಬುಧವಾರದಿಂದ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.25 ಆಮದು ಸುಂಕಗಳು ಜಾರಿಗೆ ಬಂದಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net