9 ಕೋಟಿ ರೂ. ಸೇವಾ ತೆರಿಗೆ ವಂಚನೆ: ಪತ್ರಕರ್ತರ ಮೇಲೆ ದಾಳಿ ನಡೆಸಲು ಮುಂದಾದ ಚೀನಾ ಪ್ರಜೆ!ವಿಡಿಯೋ ವೈರಲ್​ | Attack Journalists

untitled-design-2025-08-28t105527571-68afe85be7ca0
Published on

Attack Journalists : 9 ಕೋಟಿ ರೂ. ಗೂ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಚೀನಾದ ಪ್ರಜೆಯೆಂದು ಗುರುತಿಸಲ್ಪಟ್ಟ ಆಲಿಸ್​ ಲಿ ಎಂಬ ಮಹಿಳೆಯನ್ನು ನೊಯ್ಡಾದಲ್ಲಿ ಬುಧವಾರ (ಆಗಸ್ಟ್​ 27) ಪೊಲೀಸರು ಬಂಧಿಸಿದ್ದಾರೆ. ಈಕೆಯನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ಸ್ಥಳೀಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ಪತ್ರಕರ್ತರೊಬ್ಬರು ರೆಕಾರ್ಡ್​ ಮಾಡುವ ಸಂದರ್ಭದಲ್ಲಿ ಆರೋಪಿ ಮಹಿಳೆ ಕೋಪಗೊಂಡು ಕಾರಿನ ಬಾಗಿಲನ್ನು ತೆಗೆದು ಚೀನಿ ಭಾಷೆಯಲ್ಲಿ ಕೂಗುತ್ತಾ ಪತ್ರಕರ್ತರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದಾಳೆ. ಈ ವೇಳೆ, ವಕೀಲರೊಬ್ಬರು ಮಧ್ಯಪ್ರವೇಶಿಸಿ ಪತ್ರಕರ್ತರು ರೆಕಾರ್ಡ್​ ಮಾಡದಂತೆ ಕೇಳಿಕೊಂಡು, ದಯವಿಟ್ಟು ವಿಡಿಯೋ ಮಾಡುವುದನ್ನು ನಿಲ್ಲಿಸಿ ಘಟನೆ ತುಂಬಾ ತಾರಕ್ಕಕ್ಕೇರಿದೆ ಎಂದರು. ಹಾಗೇ ಕಾರಿನಲ್ಲಿ ಕುಳಿತಿದ್ದ ಇನ್ನೊಂದು ಮಹಿಳೆ ಆಲಿಸ್​ ಲಿಯನ್ನು ಸಮಾಧಾನ ಮಾಡುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ.

ತೆರಿಗೆ ವಂಚನೆ ಬಯಲಿಗೆಳೆದ ಪೊಲೀಸರು

ಆಲಿಸ್​ ಲಿ ಹಾಗೂ ಕಂಪನಿಯ ವ್ಯವಸ್ತಾಪಕ ನಿರ್ದೇಶಕ ವಿನಯ್​ ಕುಮಾರ್​ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದು, ಅವರನ್ನು ಮೀರತ್​ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದಾರೆ. ಮೆಸರ್ಸ್ ಟೆನ್ ಟೆಕ್ ಎಲ್‌ಇಡಿ ಡಿಸ್ಪ್ಲೇ ಪ್ರೈವೇಟ್ ಲಿಮಿಟೆಡ್ ವಿರುದ್ಧದ ತನಿಖೆಯ ಸಂದರ್ಭದಲ್ಲಿ ತೆರಿಗೆ ವಂಚನೆಯನ್ನು ಬಯಲು ಮಾಡಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಲಕ್ಷ್ಯ ಕುಮಾರ್ ಸಿಂಗ್ ಗುರುವಾರ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

ಈ ತನಿಖೆಯಲ್ಲಿ ವಿನಯ್​ಕುಮಾರ್​ ಮತ್ತು ಆಲಿಸ್​ ಲಿ ತಪ್ಪಾದ ತೆರಿಗೆ ವರ್ಗಗಳ ಅಡಿಯಲ್ಲಿ ಸುಮಾರು 9.19 ಕೋಟಿ ರೂ. ನಷ್ಟವಾಗಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಇವರನ್ನು ಮೀರತ್​ನಲ್ಲಿರುವ ವಿಶೇಷ ನ್ಯಾಯಾಲಯ ಸೆಪ್ಟೆಂಬರ್​ 1 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net