ರಷ್ಯಾದ ವ್ಯಾಪಾರ ಪಾಲುದಾರರ ಮೇಲಿನ ಅಮೆರಿಕದ ಸುಂಕಗಳು ಹಿಮ್ಮುಖ ಪರಿಣಾಮ ಬೀರಬಹುದು: ವ್ಲಾಡಿಮಿರ್ ಪುಟಿನ್ | US tariffs

Untitled design - 2025-10-03T114944.211
Published on

US tariffs: ಭಾರತ ಮತ್ತು ಚೀನಾ ಮೇಲೆ ಮಾಸ್ಕೋ(ರಷ್ಯಾ) ಜೊತೆಗಿನ ಇಂಧನ ಸಂಬಂಧಗಳನ್ನು ಕಡಿತಗೊಳಿಸುವಂತೆ ಒತ್ತಡ ಹೇರುವ ಅಮೆರಿಕದ ಪ್ರಯತ್ನಗಳನ್ನು ಆರ್ಥಿಕವಾಗಿ ಹಿನ್ನಡೆ ಉಂಟುಮಾಡಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಎಚ್ಚರಿಸಿದರು.

ರಷ್ಯಾ ತಜ್ಞರ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್​, ರಷ್ಯಾದ ವ್ಯಾಪಾರ ಪಾಲುದಾರರ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿದರೆ, ಅದು ಜಾಗತಿಕ ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಲು ಒತ್ತಾಯಿಸುತ್ತದೆ ಎಂದರು.

ಭಾರತ-ಚೀನಾ ತಮ್ಮನ್ನು ಅವಮಾನಿಸಿಕೊಳ್ಳಲು ಬಿಡುವುದಿಲ್ಲ

ಭಾರತವು ರಷ್ಯಾದ ಇಂಧನವನ್ನು ತ್ಯಜಿಸಬೇಕೆಂಬ ಅಮೆರಿಕದ ಕರೆಗಳ ಕುರಿತು ಮಾತನಾಡಿದ ಪುಟಿನ್, ಭಾರತವು ನಮ್ಮ ಇಂಧನ ಪೂರೈಕೆಗಳನ್ನು ನಿರಾಕರಿಸಿದರೆ, ಅದು ಒಂದು ನಿರ್ದಿಷ್ಟ ನಷ್ಟವನ್ನು ಅನುಭವಿಸುತ್ತದೆ. ಖಂಡಿತ, ಭಾರತದಂತಹ ದೇಶದ ಜನರು, ನನ್ನನ್ನು ನಂಬಿರಿ, ರಾಜಕೀಯ ನಾಯಕತ್ವವು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಯಾರ ಮುಂದೆಯೂ ಯಾವುದೇ ಅವಮಾನವನ್ನು ಎಂದಿಗೂ ಅನುಮತಿಸುವುದಿಲ್ಲ" ಎಂದರು.

ಪ್ರಧಾನಿ ನರೇಂದ್ರ ಮೋದಿ ಅಂತಹ ಯಾವುದೇ ಕ್ರಮಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ನನಗೆ ತಿಳಿದಿದೆ ಎಂದರು.

ಮಾಸ್ಕೋ ಜೊತೆಗಿನ ಅಮೆರಿಕದ ಯುರೇನಿಯಂ ಸಂಬಂಧವನ್ನು ಪುಟಿನ್ ಉಲ್ಲೇಖಿಸಿದರು ಮತ್ತು ವಾಷಿಂಗ್ಟನ್ ರಷ್ಯಾದಿಂದ ಪುಷ್ಟೀಕರಿಸಿದ ಯುರೇನಿಯಂ ಅನ್ನು ಖರೀದಿಸುತ್ತಿದ್ದರೆ, ಇತರ ದೇಶಗಳು ರಷ್ಯಾದ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸುವಂತೆ ಕರೆ ನೀಡುತ್ತಿದೆ ಎಂದು ಅಮೆರಿಕಗೆ ಟಾಂಗ್​ ನೀಡದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net