ಬಹುನಿರೀಕ್ಷಿತ 'ಯುಐ' ಟೀಸರ್​ಗೆ ಕ್ಷಣಗಣನೆ ಆರಂಭ; ಕಾರ್ಯಕ್ರಮದ ಸಮಯ ಹೀಗಿದೆ​

Untitled design - 2023-09-17T160403.156
Published on

ಬೆಂಗಳೂರು: ಸ್ಯಾಂಡಲ್​ವುಡ್​ನ 'ಬುದ್ದಿವಂತ' ನಿರ್ದೇಶಕ, ರಿಯಲ್​ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶನದ 'ಯುಐ' ಸಿನಿಮಾದ ಟೀಸರ್​ ಅನಾವರಣ ಕಾರ್ಯಕ್ರಮಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಧಿಕೃತ ಬಿಡುಗಡೆಗೆ ಸಜ್ಜಾಗಿದೆ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ಅವರ ಮುಂದಿನ ಸಿನಿಮಾಗೆ ಬಹಳ ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ದಿನಾಂಕ ಸ್ಪಷ್ಟವಾಗಿದೆ. 'ಯುಐ' ಟೈಟಲ್​ ಅನಾವರಣಗೊಂಡ ಮೊದಲ ದಿನದಿಂದಲೂ ಉಪ್ಪಿ ಅಭಿಮಾನಿಗಳಲ್ಲಿ ಭಾರೀ ಗೊಂದಲ ಮೂಡಿದೆ.

ಈ ಶೀರ್ಷಿಕೆಯ ಹಿಂದಿರುವ ಕಥೆಯೇನು, ಪೋಸ್ಟರ್ ಹೇಳುತ್ತಿರುವುದೇನು? ವರ್ಷಗಳ ನಂತರ ಮತ್ತೊಮ್ಮೆ ಡೈರಕ್ಟರ್​ ಕ್ಯಾಪ್​ ತೊಟ್ಟಿರುವ ಉಪ್ಪಿ, ಈ ಬಾರಿ ವಿಭಿನ್ನವಾಗಿ ಏನು ಮಾಡಲಿದ್ದಾರೆ ಎಂಬ ಹಲವು ಪ್ರಶ್ನೆಗಳು ಫ್ಯಾನ್ಸ್​ಗಳಲ್ಲಿ ಕಾಡುತ್ತಿದೆ. ಒಟ್ಟಾರೆ ಸಿನಿಮಾದ ಟೀಸರ್​, ಟ್ರೇಲರ್​ಗಾಗಿ ಭಾರೀ ನಿರೀಕ್ಷೆ ವ್ಯಕ್ತಪಡಿಸಿರುವ ಸಿನಿರಸಿಕರು, ಚಿತ್ರದ ಟೀಸರ್​ ರಿಲೀಸ್​ಗೆ ಕುತೂಹಲದಿಂದ ಕಾಯತೊಡಗಿದ್ದಾರೆ.

ಚಿತ್ರತಂಡ ತಿಳಿಸಿರುವಂತೆ ಸಿನಿಮಾದ ಟೀಸರ್​, ಸೆ. 18 ರಂದು ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯಾಹ್ನ 2 ರಿಂದ 8 ಗಂಟೆಯವರೆಗೂ ನಡೆಯಲಿದ್ದು,  ಸಂಜೆ 6:30ರ ವೇಳೆಗೆ ಲಹರಿ ಯೂಟ್ಯೂಬ್​ ಚಾನಲ್​ನಲ್ಲಿ ಅಧಿಕೃತವಾಗಿ ರಿಲೀಸ್ ಆಗಲಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net