ಸ್ಟೇಷನ್​ನಲ್ಲಿ ಅಸಭ್ಯವಾಗಿ ವರ್ತಿಸಿದ ಇನ್​ಸ್ಪೆಕ್ಟರ್​ಗೆ ಮಹಿಳೆ ಬುದ್ಧಿ ಕಲಿಸಿದ್ದು ಹೀಗೆ....!

UP police
Published on

ಲಖನೌ: ದೂರು ಕೊಡೋಕೆ ಅಂತಾ ಸ್ಟೇಷನ್​ಗೆ ಬಂದ ಮಹಿಳೆ ನೋಡಿ ಇನ್​ಸ್ಪೆಕ್ಟರ್​ಗೆ ಅದೇನ್​ ಅನ್ಸುತ್ತೋ...? ಆಕೆ ಎದುರು ಅಸಭ್ಯವಾಗಿ ವರ್ತಿಸೋಕೆ ಶುರು ಮಾಡಿದ್ದಾನೆ. ಇದಕ್ಕೆ ಮಹಿಳೆ ಸರಿಯಾಗಿಯೇ ಬುದ್ಧಿ ಕಲಿಸಿದ್ದಾಳೆ.

ಉತ್ತರಪ್ರದೇಶದ ದೇವರಿಯಾದಲ್ಲಿ ಇನ್​ಸ್ಪೆಕ್ಟರ್​ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ಈಗ ಅಮಾನತು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಭಾಟ್ನಿ ಠಾಣೆಯ ಠಾಣಾಧಿಕಾರಿಯಾಗಿದ್ದ ಭೀಷ್ಮ ಪಾಲ್​ ಸಿಂಗ್​ ದೂರು ನೀಡಲು ಬಂದ ಮಹಿಳೆ ಎದುರಲ್ಲೇ ಹಸ್ತ ಮೈಥುನ ನಡೆಸಿದ್ದಾನೆ. ದೂರಿನ ವಿಚಾರಣೆಗೆ ಬಂದಾಗಲೆಲ್ಲ ಈ ಕೃತ್ಯ ಮುಂದುವರಿದಿದೆ. ಇದರಿಂದ ಬೇಸತ್ತ ಮಹಿಳೆ ಆತನಿಗೆ ಬುದ್ಧ ಕಲಿಸಲು ನಿರ್ಧರಿಸಿದ್ದಾಳೆ. ಆತನ ಕೃತ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾಳೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾಳೆ. ಇದು ವೈರಲ್​ ಆಗುತ್ತಿದ್ದಂತೆ ಆತನ ಉದ್ಯೋಗಕ್ಕೆ ಕುತ್ತು ತಂದಿದೆ.

ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ದೇವರಿಯಾ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಭೂವಿವಾದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಪದೇಪದೆ ಠಾಣೆಗೆ ಅಲೆದಾಡಿಸುತ್ತಿದ್ದ ಇನ್​ಸ್ಪೆಕ್ಟರ್​ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇತರ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ತಿಳಿದ ಬಳಿಕ ಆತನಿಗೆ ಬುದ್ಧಿ ಕಲಿಸಲೆಂದೇ ಚಿತ್ರೀಕರಿಸಿದ್ದಾಗಿ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net