More

    ದೇಗುಲವನ್ನು ಮಸೀದಿಯಾಗಿಸಿದ ತಬ್ಲಿಘಿಗಳು; ಪಾಕ್​ನಲ್ಲಿ 102 ಹಿಂದುಗಳ ಬಲವಂತದ ಮತಾಂತರ

    ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮೇರೆ ಮೀರಿದೆ. ಸಿಂಧ್​ ಪ್ರಾಂತ್ಯದ ಬಡಿನ್​ ಜಿಲ್ಲೆಯ ಗೊಲಾರ್ಚಿಯಲ್ಲಿ ದೇಗುಲದಲ್ಲಿದ್ದ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಲ್ಲದೇ, ದೇಗುಲವನ್ನು ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ. 102 ಹಿಂದುಗಳ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ.

    ಕಳೆದ ಮೇ 17ರಂದು ಈ ಭೀಬತ್ಸ ಘಟನೆ ನಡೆದಿದೆ. ತಬ್ಲಿಘಿ ಜಮಾತ್​ ಸದಸ್ಯರು ಹಿಂದುಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಮತಾಂತರಕ್ಕೆ ಒಪ್ಪದ ಬಾಲಕನನ್ನು ಅಪಹರಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇದನ್ನೂ ಓದಿ; ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಹಿನ್ನಡೆ 

    ಪಾಕಿಗಳ ಬರ್ಬರ ಕೃತ್ಯ ವಿರೋಧಿಸಿರುವ ಹಿಂದುಗಳು ಪ್ರತಿಭಟನೆ ನಡೆಸಿದ್ದಾರೆ. ನಾವು ಸಾಯಲು ಸಿದ್ಧವಾಗಿದ್ದೇಯೇ ಹೊರತು ಮತಾಂತರಕ್ಕೆ ಸಿದ್ದರಿಲ್ಲ ಎಂದು ಮಹಿಳೆಯೊಬ್ಬಳು ಭಿತ್ತಿಫಲಕ ಹಿಡಿದಿದ್ದಾಳೆ. ನಮ್ಮ ಮೇಲೆ ಭಾರಿ ದೌರ್ಜನ್ಯ ನಡೆಸಲಾಗಿದೆ. ನಮ್ಮ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಮನೆಗಳನ್ನು ನಾಶಪಡಿಸಲಾಗಿದೆ. ಮನೆಗಳನ್ನು ಮರಳಿ ನೀಡಬೇಕೆಂದರೆ ಇಸ್ಲಾಂಗೆ ಮತಾಂತರ ಹೊಂದಬೇಕು ಎಂದು ತಬ್ಲೀಘಿಗಳು ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಹಿಂದುಗಳ ಬಲವಂತದ ಮತಾಂತರ ಹೊಸದೇನೂ ಅಲ್ಲ. ಇದಷ್ಟೇ ಅಲ್ಲ, ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಮತಾಂತರಿಸುವ, ಬಳಿಕ ಅವರನ್ನು ಮದುವೆಯಾಗುವ ಹೀನ ಕೃತ್ಯ ಪಂಜಾಬ್​ ಮತ್ತು ಸಿಂಧ್​ ಪ್ರಾಂತ್ಯದಲ್ಲಿ ಅವ್ಯಾಹತ ನಡೆದಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವೂ ಒಪ್ಪಿಕೊಂಡಿದೆ.

    ಇದನ್ನೂ ಓದಿ; ಪಾಕ್​ ಪ್ರಧಾನಿಗೆ ಉಗ್ರನೇ ಹೀರೋ; ಜಾಗತಿಕ ಭಯೋತ್ಪಾದಕನನ್ನು ಹುತಾತ್ಮ ಎಂದ ಇಮ್ರಾನ್​ ಖಾನ್​

    ಶಾಲೆಗಳಲ್ಲಿ ಬಲವಂತವಾಗಿ ಇಸ್ಲಾಂ ಶಿಕ್ಷಣ ಪಡೆಯಬೇಕಾಗಿದೆ. ಜತೆಗೆ, ಹಿಂದುಗಳಿಗೆ ಅಲ್ಲಿ ರುದ್ರಭೂಮಿಯೂ ಇಲ್ಲ ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ.

    ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts