More

    ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಭಾರಿ ಹಿನ್ನಡೆ

    ನವದೆಹಲಿ: ಹಾಂಗ್​ಕಾಂಗ್​ ಮೇಲೆ ಪರಮಾಧಿಕಾರ ಸ್ಥಾಪಿಸುವ ವಿವಾದಾತ್ಮಕ ಭದ್ರತಾ ಕಾಯ್ದೆಗೆ ಚೀನಾ ಅಂಗೀಕಾರ ನೀಡಿದೆ. ವಿಚಿತ್ರವೆಂದರೆ, ಈ ಕಾನೂನಿಗೆ ಒಪ್ಪಿಗೆ ಸಿಕ್ಕ ಕೆಲವೇ ಕ್ಷಣಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಈವರೆಗೆ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಂಘಟನೆ, ವ್ಯಕ್ತಿಗಳು ಹಿಂದೆ ಸರಿದಿದ್ದಾರೆ.

    ಹೊಸ ಕಾಯ್ದೆ ಪ್ರಕಾರ ಪ್ರತ್ಯೇಕತೆ ಹೋರಾಟ, ಸಂಘರ್ಷ ಹಾಗೂ ಗಲಭೆಯಲ್ಲಿ ತೊಡಗುವುದನ್ನು ಅಪರಾಧಿಕ ಕೃತ್ಯ ಎಂದು ಪರಿಗಣಿಸಿ ಶಿಕ್ಷೆ ವಿಧಿಸಬಹುದಾಗಿದೆ. ಇದು ಹೋರಾಟಗಾರರಲ್ಲಿ ಇನ್ನಷ್ಟು ಆಕ್ರೋಶ ಮೂಡಿಸಿದೆ. ಆದರೆ, ಹೋರಾಟವನ್ನು ಹತ್ತಿಕ್ಕಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಡೆಮೊಸಿಸ್ಟೊ ಸಂಘಟನೆ ತನ್ನೆಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದೆ. ಅಲ್ಲದೇ, ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದ ಜೋಷುವಾ ವಾಂಗ್​ ಸಂಘಟನೆಯಿಂದ ದೂರವಿರುವುದಾಗಿ ಘೋಷಿಸಿದ್ದಾನೆ. ಆದರೆ, ಹೋರಾಟ ಮುಂದುವರಿಸುವುದಾಗಿ ಕೆಲವರು ಹೇಳಿದ್ದಾರೆ.

    ಇದನ್ನೂ ಓದಿ: ಚೀನಾಗೆ ಬೀಳಲಿದೆ ಮತ್ತೊಂದು ಹೊಡೆತ; ಆ್ಯಪ್​ಗಳ ಬಳಿಕ 5ಜಿ ಉಪಕರಣಗಳ ಬ್ಯಾನ್​ಗೂ ಸಿದ್ಧತೆ

    ಹಾಂಗ್​ಕಾಂಗ್​ನಲ್ಲಿ ಕಚೇರಿ ತೆರೆಯಲಿರುವ ಚೀನಾ: ಹೊಸ ಕಾಯ್ದೆ ಪ್ರಕಾರ ಹಾಂಗ್​ಕಾಂಗ್​ನಲ್ಲಿ ಚೀನಾ ರಾಷ್ಟ್ರೀಯ ಭದ್ರತಾ ಕಾಯ್ದೆ ಅನುಷ್ಠಾನಕ್ಕೆಂದೇ ಹೊಸ ಕಚೇರಿ ತೆರೆಯಲಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಇದು ನೋಡಿಕೊಳ್ಳಲಿದೆ. ಅಲ್ಲದೇ, ಶಾಲೆಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಶಿಕ್ಷಣದ ಬಗ್ಗೆ ನಿಗಾ ವಹಿಸಲಿದೆ. ಇದಕ್ಕಾಗಿ ಹಾಂಗ್​ಕಾಂಗ್​ ಬೀಜಿಂಗ್​ ಸಲಹೆಗಾರರನ್ನು ಒಳಗೊಂಡ ಪ್ರತ್ಯೇಕ ಸಮಿತಿಯನ್ನು ರಚಿಸಬೇಕಿದೆ.

    ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವನ್ನು ಹಾಂಗ್​ಕಾಂಗ್​ನ ಮುಖ್ಯಾಧಿಕಾರಿಗೆ ನೀಡಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕಾಯ್ದೆಯನ್ನು ಯಾವ ರೀತಿ ವ್ಯಾಖ್ಯಾನಿಸಬೇಕು ಎಂಬ ಅಧಿಕಾರ ಅಂತಿಮವಾಗಿ ಚೀನಾಗೆ ಸೇರಿದೆ. ಹಾಂಗ್​ಕಾಂಗ್​ನ ಕಾಯ್ದೆಯೊಂದಿಗೆ ಹೊಸ ಕಾಯ್ದೆ ಘರ್ಷಣೆಗೆ ಒಳಗಾದರೂ ಕೊನೆಗೆ ಚೀನಾದ ಕಾಯ್ದೆಯೇ ಉಳಿದುಕೊಳ್ಳಲಿದೆ.

    ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!

    ಏನು ಬದಲಾಗುತ್ತೆ?: ಈ ಕಾಯ್ದೆ ಹಾಂಗ್​ಕಾಂಗ್​ನ ಪ್ರತ್ಯೇಕತೆಯನ್ನೇ ಕಸಿದುಕೊಳ್ಳಲಿದೆ. ಜನರಿಗಿರುವ ಸ್ವಾತಂತ್ರ್ಯ ಉಳಿದುಕೊಳ್ಳಲಿದೆಯಾದರೂ ಯಾವುದೇ ಚೀನಾ ವಿರುದ್ಧದ ಪ್ರತಿಭಟನೆ, ಹೋರಾಟ ಶಿಕ್ಷಾರ್ಹ ಅಪರಾಧವಾಗಲಿದೆ.

    ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts