More

    ಚೀನಾಗೆ ಬೀಳಲಿದೆ ಮತ್ತೊಂದು ಹೊಡೆತ; ಆ್ಯಪ್​ಗಳ ಬಳಿಕ 5ಜಿ ಉಪಕರಣಗಳ ಬ್ಯಾನ್​ಗೂ ಸಿದ್ಧತೆ

    ನವದೆಹಲಿ: ಕೇಂದ್ರ ಸರ್ಕಾರ ಚೀನಿ ಆ್ಯಪ್​ಗಳನ್ನು ಅಧಿಕೃತವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ, ಮತ್ತೊಂದು ಹೊಡೆತ ನೀಡಲು ಭಾರತ ಸಜ್ಜಾಗಿದೆ.

    ಚೀನಾದ 5ಜಿ ಉಪಕರಣಗಳನ್ನು ಕೂಡ ನಿರ್ಬಂಧಿಸಿ ಆದೇಶ ಹೊರಡಿಸಲು ಸಚಿವರ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 5ಜಿ ಅನುಷ್ಠಾನಗೊಳಿಸಲು ಚೀನಾದ ಹುವೈ ಹಾಗೂ ಇತರ ಕಂಪನಿಗಳು ವಿವಿಧ ಉಪಕರಣಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉಪಕರಣಗಳಿಗೆ ನಿರ್ಬಂಧ ವಿಧಿಸಲು ಚರ್ಚೆ ನಡೆಸಲಾಗಿದೆ.

    ಇದನ್ನೂ ಓದಿ; ಶಾಲೆ- ಕಾಲೇಜು ಜು.31ರ ವರೆಗೂ ಬಂದ್​; ಆನ್​ಲೈನ್​ ಶಿಕ್ಷಣಕ್ಕೆ ಪ್ರೋತ್ಸಾಹ; ಕೇಂದ್ರ ಮಾರ್ಗಸೂಚಿ ಪ್ರಕಟ

    ಸದ್ಯ ಭಾರತದಲ್ಲಿ 5ಜಿ ಅನುಷ್ಠಾನ ಕನಿಷ್ಠ ಒಂದು ವರ್ಷವಾದರೂ ವಿಳಂಬವಾಗಲಿದೆ. ಏಕೆಂದರೆ ಇನ್ನೂ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಯೇ ನಡೆದಿಲ್ಲ.

    ಇದಲ್ಲದೇ, ಈ ತರಂಗಾಂತರಗಳನ್ನು ಖರೀದಿಸಲು ಪೈಪೋಟಿ ನಡೆಸಬೇಕಾದ ವೋಡಾಫೋನ್​, ಐಡಿಯಾ ಸೇರಿ ಹಲವು ದೂರಸಂಪರ್ಕ ಕಂಪನಿಗಳೇ ಆರ್ಥಿಕ ಸಂಕಷ್ಟದಲ್ಲಿವೆ.

    ಇದನ್ನೂ ಓದಿ; ಕರೊನಾ ಮಾತ್ರವಲ್ಲ, ಲಾಕ್​ಡೌನ್​ ಕೂಡ ಹೆಚ್ಚುತ್ತಿದೆ….! ಸೇರಿ ಏಳು ರಾಜ್ಯಗಳಲ್ಲಿ ನಿರ್ಬಂಧ ವಿಸ್ತರಣೆ

    ಚೀನಿ ಉಪಕರಣಗಳಿಗೆ ನಿರ್ಬಂಧ ವಿಧಿಸಿದ್ದೇ ಆದಲ್ಲಿ ದೇಶೀಯವಾಗಿ ತಾಂತ್ರಿಕತೆ ಅಭಿವೃದ್ಧಿಗೆ ಸಹಾಯವಾಗುವುದಲ್ಲದೇ, ಚೀನಾಗೆ ಆರ್ಥಿಕವಾಗಿ ಭಾರಿ ಹೊಡೆತ ನೀಡಿದಂತಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹುವೈ ಕಂಪನಿ ಮುಖ್ಯಸ್ಥ ಪಿಎಲ್​ಎ ಜತೆಗೆ ನಂಟು ಹೊಂದಿದ ಆರೋಪದಲ್ಲಿ ಅಮೆರಿಕ ಈಗಾಗಲೇ ಇದಕ್ಕೆ ಈಗಾಗಲೇ ನಿರ್ಬಂಧ ವಿಧಿಸಿದೆ.

    ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts