More

    ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

    ನವದೆಹಲಿ: ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿರುವ ಕರೊನಾ ಲಸಿಕೆ ಸಂಶೋಧನಾ ಕಾರ್ಯ ಯಶಸ್ವಿಯಾಗಿ ಔಷಧ ಸಜ್ಜುಗೊಂಡಿದ್ದೇ ಆದಲ್ಲಿ ಮೊದಲಿಗೆ ಅದು ಸಿಗೋದು ರೋಗಿಗಳಿಗಲ್ಲ…!

    ಒಂದು ವೇಳೆ ಕರೊನಾಗೆ ಲಸಿಕೆ ಸಿದ್ಧವಾದಲ್ಲಿ ಅದರ ವಿತರಣಾ ವ್ಯವಸ್ಥೆ ಹೇಗಿರಬೇಕು ಎಂಬುದು ನಾಲ್ಕು ಅಂಶಗಳ ಕ್ರಿಯಾ ಯೋಜನೆಯ ಭಾಗವಾಗಿದೆ. ಮೊದಲಿಗೆ ಯಾರಿಗೆ ನೀಡಬೇಕೆಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧಾರ ಅಂತಿಮಗೊಳಿಸಲಾಗಿದೆ.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಯೋಜನೆಯು ವೈದ್ಯಕೀಯ ವಿತರಣಾ ವ್ಯವಸ್ಥೆ ನಿರ್ವಹಿಸುವುದು, ಹೆಚ್ಚು ಅಪಾಯದಲ್ಲಿರುವ ಜನ ಸಮೂಹವನ್ನು ಗುರುತಿಸುವುದು, ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಖಾಸಗಿ ಮತ್ತು ನಾಗರಿಕ ಸಮಾಜದ ಪಾತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ.

    ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್​ಗಳು, ಮುಂಚೂಣಿ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಹೆಚ್ಚು ಅಪಾಯಕ್ಕೊಳಗಾಗಿರುವವರು ಲಸಿಕೆ ಪಡೆಯುವಲ್ಲಿ ಮೊದಲ ಆದ್ಯತೆ ಪಡೆದುಕೊಳ್ಳಲಿದ್ದಾರೆ.

    ಇದನ್ನೂ ಓದಿ; ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

    ಔಷಧ ವಿತರಣೆಗೆ ಯಾರೇ ಆದರೂ ಎಲ್ಲೇ ಇದ್ದರೂ ಎಂಬ ಸೂತ್ರ ಅನುಸರಿಸಲಿದೆ. ಇಲ್ಲಿ ಯಾವುದೇ ಪ್ರದೇಶಕ್ಕೆ ಸಂಬಂಧಿಸಿದಂತೆ ನಿರ್ಬಂಧಗಳಿರುವುದಿಲ್ಲ ಎಂದು ಹೇಳಲಾಗಿದೆ.

    ಇದೆಲ್ಲಕ್ಕಿಂತ ಮುಖ್ಯವಾಗಿ ಲಸಿಕೆ ಸಾರ್ವತ್ರಿಕವಾಗಿ ಮಿತವ್ಯಯದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಲಸಿಕೆ ಉತ್ಪಾದನೆ ಹಾಗೂ ಉತ್ಪಾದನೆ ಸಾಮರ್ಥ್ಯದ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ.

    ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts