

ನವದೆಹಲಿ: ಕೊವಿಡ್-19 ಸಾಂಕ್ರಾಮಿಕ ನಿಯಂತ್ರಣವನ್ನು ಯಶಸ್ವಿಯಾಗಿ ನಿಭಾಯಿಸಿದ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ವಿಶ್ವ ಸಂಸ್ಥೆ ಮಂಗಳವಾರ ಗೌರವ ಸಲ್ಲಿಸಿದೆ.
ವಿಶ್ವಸಂಸ್ಥೆ ಜೂ.23ರಂದು ಸಾರ್ವಜನಿಕ ಸೇವಾ ದಿನವನ್ನು ಆಚರಿಸಿದ್ದು, ಅದರಲ್ಲಿ ಮಾತನಾಡಲು ಭಾರತದಿಂದ ಕೆ.ಕೆ.ಶೈಲಜಾ ಅವರಿಗೆ ಆಹ್ವಾನ ನೀಡಿತ್ತು. ಭಾರತದಲ್ಲಿ ಮೊದಲ ಕೊವಿಡ್ ಪ್ರಕರಣ ಪತ್ತೆಯಾಗಿದ್ದು ಕೇರಳದಲ್ಲಾದರೂ ಕರೊನಾ ನಿಯಂತ್ರಣದ ಕ್ರಮಗಳಲ್ಲಿ ಇಡೀ ದೇಶಕ್ಕೇ ಆ ರಾಜ್ಯ ಮಾದರಿಯಾಗಿದೆ. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ನೇತೃತ್ವದಲ್ಲಿ ಸಾಂಕ್ರಾಮಿಕ ರೋಗದ ಪ್ರಸರಣವನ್ನು ಯಶಸ್ವಿಯಾಗಿ ತಡೆಗಟ್ಟಲಾಗುತ್ತಿದೆ.
ಅದನ್ನು ಗುರುತಿಸಿದ್ದ ವಿಶ್ವ ಸಂಸ್ಥೆ ಶೈಲಜಾ ಅವರನ್ನು ಸಾರ್ವಜನಿಕ ಸೇವಾ ದಿನಕ್ಕೆ ಸ್ಪೀಕರ್ ಆಗಿ ಆಹ್ವಾನಿಸಿತ್ತು. ಈ ವೆಬಿನಾರ್ ಸಮಾರಂಭದಲ್ಲಿ ಮಾತನಾಡಿದ ಶೈಲಜಾ ಅವರು, ಕೇರಳದಲ್ಲಿ ಕರೊನಾ ನಿಯಂತ್ರಣಕ್ಕೆ ತಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡ ಕ್ರಮಗಳ ಬಗ್ಗೆ ಹೇಳಿದ್ದಾರೆ. ನಂತರ ವಿಶ್ವಸಂಸ್ಥೆಯ ಪ್ರಮುಖರು ಅವರನ್ನು ಗೌರವಿಸಿದ್ದಾರೆ. ಇದನ್ನೂ ಓದಿ: ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್ಗೆ ಸಖತ್ ಸರ್ಪ್ರೈಸ್ ಕೊಡಲು ಗಣೇಶ್ ರೆಡಿ..
ವಿಶ್ವ ಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಭಾರತದಿಂದ ಆಯ್ಕೆಯಾದ ಕೇರಳದ ಆರೋಗ್ಯ ಸಚಿವೆ ಶೈಲಜಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಇದನ್ನೂ ಓದಿ: ಟ್ರಂಪಣ್ಣಾ… ಎಚ್1ಬಿ ವೀಸಾ ರದ್ದುಗೊಳಿಸಿದ್ರೆ ನಿಮ್ ಹೆಂಡ್ತಿ ಗತಿಯೇನಣ್ಣಾ…?
ಈ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮನ್ಯ ಸಭೆಯ ಅಧ್ಯಕ್ಷ ಟಿಜ್ಜಾನಿ ಮುಹಮ್ಮದ್-ಬಂಡೆ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. (ಏಜೆನ್ಸೀಸ್)