More

    ಟ್ರಂಪಣ್ಣಾ… ಎಚ್‌1ಬಿ ವೀಸಾ ರದ್ದುಗೊಳಿಸಿದ್ರೆ ನಿಮ್‌ ಹೆಂಡ್ತಿ ಗತಿಯೇನಣ್ಣಾ…?

    ನ್ಯೂಯಾರ್ಕ್‌: ಅಮೆರಿಕದಲ್ಲಿ ಕೆಲಸಕ್ಕೆಂದು ಹೋಗುವ ವಲಸಿಗರಿಗೆ ನೀಡುವ ಎಚ್ 1ಬಿ ವೀಸಾವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾತ್ಕಾಲಿಕವಾಗಿ ರದ್ದುಗೊಳಿಸಿರುವುದು ವಿರೋಧ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಬಾರಿ ವಿವಾದವನ್ನೂ ಸೃಷ್ಟಿಸಿದೆ.

    ಎಚ್‌-1ಬಿ, ಎಲ್‌-1 ಮತ್ತಿತರ ಎಲ್ಲ ವಿದೇಶಿ ವರ್ಕ್ ವೀಸಾಗಳನ್ನು ಜೂನ್‌ 24ರಿಂದ ಡಿಸೆಂಬರ್‌ 31ರ ತನಕ ಟ್ರಂಪ್‌ ಅಮಾನತಿನಲ್ಲಿಟ್ಟಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಚ್1ಬಿ ವೀಸಾ ಹೊಂದಿರುವ ಭಾರತೀಯ ಉದ್ಯೋಗಿಗಳು ಅತಿ ಹೆಚ್ಚು ತೊಂದರೆಯನ್ನು ಎದುರಿಸುವಂತಾಗಿದೆ.

    ಆದರೆ ಅಚ್ಚರಿಯ ಸಂಗತಿ ಎಂದರೆ, ಅಮೆರಿಕ ಮೂಲದವರಲ್ಲದ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಅವರೂ ಎಚ್1ಬಿ ವೀಸಾದಲ್ಲಿ ಅಮೆರಿಕಕ್ಕೆ‌ ಹೋಗಿದ್ದಾರೆ ಎನ್ನಲಾಗಿದ್ದು, ಅದನ್ನೇ ಮುಂದುಮಾಡಿಕೊಂಡು ನೆಟ್ಟಿಗರು ಟ್ರಂಪ್‌ ವಿರುದ್ಧ ತಿರುಗಿಬಿದ್ದಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲಿ ಶಿಕ್ಷಿತರಿಗೆ ಆದ್ಯತೆಯ ಎಚ್-1ಬಿ ವೀಸಾ ಮಸೂದೆ: ಭಾರತೀಯರಿಗೆ ಅನುಕೂಲ

    ನಿಮ್ಮ ಹೆಂಡತಿ ಕೂಡ ಇದೇ ವೀಸಾದಲ್ಲಿ ಅಮೆರಿಕಕ್ಕೆ ಆಗಮಿಸಿದ್ದು ಅವರನ್ನೇನು ಮಾಡುತ್ತೀರಿ ಎಂದು ಕೇಳಿದ್ದಾರೆ. ಮೂಲತ ಸ್ಲೊವೆಲಿಯನ್‌ದವರಾದ ಮೆಲನಿಯಾ, 96ರಲ್ಲಿ ಪ್ರವಾಸಿ ವೀಸಾದ ಮೇಲೆ ಅಮೆರಿಕಕ್ಕೆ ಹೋಗಿದ್ದಾರೆ. 2001ರಲ್ಲಿ ಇಬಿ1 ವೀಸಾ ಪಡೆದಿರುವ ಅವರು, 2006ರಲ್ಲಿ ಅಮೆರಿಕದ ಪೌರತ್ವ ಪಡೆದರು. ಇದೀಗ ಆಕೆಯ ಪಾಲಕರಿಗೆ ಪೌರತ್ವ ಕೊಡಿಸಲು ಸಿದ್ಧತೆ ನಡೆಸಲಾಗಿದೆ.

    ಟ್ರಂಪಣ್ಣಾ ಮೊದಲು ನಿಮ್ಮ ಹೆಂಡತಿ ಬಗ್ಗೆಯೂ ವಿಚಾರ ಮಾಡಿ ಆಮೇಲೆ ರದ್ದತಿ ಕುರಿತು ನಿರ್ಧಾರ ತೆಗೆದುಕೊಳ್ಳಿ ಎಂದೂ ಕೆಲವರು ಕಮೆಂಟ್‌ ಹಾಕಿದ್ದಾರೆ.

    ಈ ಎಲ್ಲವನ್ನು ಟ್ರಂಪ್ ಅವರಿಗೆ ನೆನಪಿಸಿರುವ ನೆಟ್ಟಿಗರು, ಒಂದು ವೇಳೆ ಎಚ್1ಬಿ ವೀಸಾ ಇರದಿದ್ದರೆ ನಿಮಗೆ ನಿಮ್ಮ ಪತ್ನಿಯ ಪರಿಚಯವೇ ಆಗುತ್ತಿರಲಿಲ್ಲ. ಈಗ ಅವರ ಗತಿಯೇನು ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಎಚ್1ಬಿ ವೀಸಾದ ಮೇಲೆ‌ ಆಗಮಿಸಿದ ಮೆಲನಿಯಾ ಟ್ರಂಪ್ ಹಾಗೂ ಆಕೆಯ ಪಾಲಕರನ್ನು ಅವರ ದೇಶಕ್ಕೆ ವಾಪಸ್‌ ಕಳುಹಿಸುವಿರೇ ಎಂದು ಪ್ರಶ್ನಿಸಿದ್ದಾರೆ.

    ಉನ್ನತ ಕೌಶಲ ಇರುವವರಿಗೆ ಮಾತ್ರ ನೀಡಲಾಗಿರುವ ಈ ವೀಸಾವನ್ನು ನಿಮ್ಮ ಪತ್ನಿಗೆ ಹೇಗೆ ನೀಡಿದ್ದೀರಿ ಎಂದೂ ಕೆಲವರು ಪ್ರಶ್ನಿಸಿದ್ದಾರೆ.

    ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಅವರ ಪ್ರಮಾಣ ಪತ್ರಗಳನ್ನು ನೀಡುವಂತೆ ನೀವು ವರ್ಷಗಟ್ಟಲೇ ಕೇಳಿದ್ದೀರಿ. ಈಗ ನಿಮ್ಮ ಹೆಂಡತಿಯ ಎಲ್ಲಾ ದಾಖಲೆಗಳನ್ನು ನಾನು ಕೇಳುತ್ತಿದ್ದೇನೆ. ಅವರು ಹೇಗೆ ಇಲ್ಲಿ ನೆಲೆಸಿದ್ದಾರೆ ಎನ್ನುವುದು ಮೊದಲು ತಿಳಿಯಲಿ ಎಂದು ಅಂಡ್ರಿಯಾ ಜಂಕರ್‌ ಎನ್ನುವವರು ಟ್ವಿಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಮೆರಿಕ ಸಂಸ್ಥಾನ ಪ್ರತಿವರ್ಷ 65,000 ಎಚ್‌-1ಬಿ ವೀಸಾಗಳನ್ನು (ಅಲ್ಲದೆ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ 20 ಸಾವಿರ ) ವಿತರಿಸುತ್ತದೆ. 2016ರವರೆಗೂ ಶೇ.70ರಷ್ಟು ಎಚ್‌-1ಬಿ ವೀಸಾಗಳನ್ನು ಭಾರತೀಯರೇ ಪಡೆದಿದ್ದಾರೆ ಎಂಬ ಅಂಕಿಅಂಶವನ್ನು ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ನೀಡಿದೆ. ಔದ್ಯಮಿಕ ಅಂಕಿಅಂಶಗಳ ಪ್ರಕಾರ ಸುಮಾರು ಮೂರುವರೆ ಲಕ್ಷ 3 ಭಾರತೀಯ ಇಂಜಿನಿಯರ್‌ಗಳು ಎಚ್‌-1ಬಿ ವೀಸಾದ ಮೇಲೆ ಅಮೆರಿಕದಲ್ಲಿದ್ದಾರೆ.

    ಅಮೆರಿಕದಲ್ಲಿ ಮೂವರು ಭಾರತೀಯರ ನಿಗೂಢ ಸಾವು- ತನಿಖೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts