ಅಮೆರಿಕದಲ್ಲಿ ಮೂವರು ಭಾರತೀಯರ ನಿಗೂಢ ಸಾವು- ತನಿಖೆ ಆರಂಭ

swimmingpool
Published on

ನ್ಯೂಯಾರ್ಕ್: ಒಂದೇ ಮನೆಯ ಮೂವರು ಸದಸ್ಯರು ಅಮೆರಿಕದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಭಾರತೀಯ ಮೂಲದ ಈ ಕುಟುಂಬದ ಸಾವಿನ ಹಿಂದಿನ ರಹಸ್ಯ ಇದೀಗ ಬಯಲಾಗಬೇಕಿದೆಯಷ್ಟೇ.

ಅಮೆರಿಕದ ನ್ಯೂಜೆರ್ಸಿಯ ಈಸ್ಟ್ ಬ್ರೂನ್ಸ್‍ವಿಕ್‍ನಲ್ಲಿ ಇರುವ ಮನೆಯಲ್ಲಿ ಈ ಸಾವು ಸಂಭವಿಸಿದೆ. ಮನೆಯ ಹಿಂಬದಿಯಲ್ಲಿ ಇರುವ ಕೊಳದಲ್ಲಿ ಮೂವರ ಶವ ಪತ್ತೆಯಾಗಿದೆ.

ಮಾವ, ಸೊಸೆ ಹಾಗೂ 8 ವರ್ಷದ ಬಾಲಕಿ ಮೃತಪಟ್ಟವರು. ಅವರನ್ನು ಭರತ್ ಪಟೇಲ್ (62), ನಿಶಾ ಪಟೇಲ್ (33) ಹಾಗೂ ನಿಶಾ ಅವರ ಮಗಳು ಎಂದು ಗುರುತಿಸಲಾಗಿದೆ. ಮೂವರೂ ಕೊಳದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಚ್ಚರಿಯ ಸಂಗತಿ ಎಂದರೆ ಇವು ಈ ಮನೆಯನ್ನು 20 ದಿನಗಳ ಹಿಂದಷ್ಟೇ ಖರೀದಿ ಮಾಡಿದ್ದರು. ಮನೆಯ ಹಿಂಭಾಗದಲ್ಲಿ ಕೊಳ ಇದೆ. ನೆಲಮಟ್ಟದಿಂದ ಎತ್ತರದಲ್ಲಿರುವ ಈ ಕೊಳದಲ್ಲಿ ಆಕಸ್ಮಿಕವಾಗಿ ಬಿದ್ದಿರುವ ಸಾಧ್ಯತೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದು ಆತ್ಮಹತ್ಯೆಯೇ, ಕೊಲೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಮೇಲ್ನೋಟಕ್ಕೆ ಕೊಳದಲ್ಲಿನ ನೀರಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದು ಎಂಬ ಶಂಕೆ ಇದೆ. ಆದರೆ ತನಿಖೆಯಿಂದ ಸತ್ಯ ಬಯಲಾಗಬೇಕಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net