VIDEO: ವೃದ್ಧ ದಂಪತಿಯ ಲವ್ ಡಾನ್ಸ್‌ ಸೀಕ್ರೇಟ್‌ ಬಯಲು

sikh couple
Published on

ಚಂಡೀಗಢ: ಇದು 2018ರ ಕಥೆ. ಪಂಜಾಬ್‌ ಮೂಲದ ಸಿಖ್‌ ವೃದ್ಧ ದಂಪತಿ ಪಾರ್ಟಿಯೊಂದರಲ್ಲಿ ನೃತ್ಯ ಮಾಡಿದ್ದ ವಿಡಿಯೋ ಭಾರಿ ವೈರಲ್‌ ಆಗಿ ರಾತ್ರೋರಾತ್ರಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಬಿಟ್ಟಿದ್ದರು.

ಎರಡು ವರ್ಷಗಳ ಈ ಹಿಂದಿನ ಡಾನ್ಸ್‌ ಸೀಕ್ರೆಟ್‌ ಅನ್ನು ಅವರು ಇದೀಗ ದಿ ಹ್ಯೂಮನ್ಸ್ ಆಫ್ ಬಾಂಬೆಯ ಫೇಸ್‌ಬುಕ್ ಪುಟದಲ್ಲಿ ಶೇರ್‌ ಮಾಡಿದ್ದಾರೆ. ತನ್ನ ಹೆಂಡತಿಯನ್ನು ಹೇಗೆ ಭೇಟಿಯಾದೆ, ಹೇಗೆ ತಾನು ನೃತ್ಯ ಕಲಿತೆ ಎನ್ನುವುದನ್ನು ಗಂಡ ಇದರಲ್ಲಿ ಬರೆದುಕೊಂಡಿದ್ದು, ಇದು ಕೂಡ ಅಷ್ಟೇ ವೈರಲ್‌ ಆಗಿದೆ.

‘ನಾನು ಕಾಲೇಜಿನಲ್ಲಿ ಇರುವ ಸಮಯದಲ್ಲಿ ತುಂಬಾ ನಾಚಿಕೆ ಸ್ವಭಾವದವನಾಗಿದ್ದೆ. ನನಗೆ ನೃತ್ಯ ಎಂದರೆ ಆಗುತ್ತಲೇ ಇರಲಿಲ್ಲ. ಸ್ಟೇಜ್‌ ಮೇಲೆ ಹೋಗುವುದಕ್ಕೂ ನಾಚಿಕೆಯಾಗುತ್ತಿತ್ತು.

ಅದೊಂದು ದಿನ ‍ಫಂಕ್ಷನ್‌ಗೆ ಹೋದಾಗ ಸ್ನೇಹಿತನ ಚಿಕ್ಕಮ್ಮ ನನ್ನನ್ನು ನೃತ್ಯ ಮಾಡಲು ಎಳೆದುಬಿಟ್ಟರು. ನನ್ನ ಪಾದಗಳು ನಡುಗಹತ್ತಿದವು. ನಡೆಯಲು ಕೂಡ ನನ್ನಿಂದ ಸಾಧ್ಯವಾಗಲಿಲ್ಲ. ತುಂಬಾ ಮುಜುಗರವಾಯಿತು, ಎಲ್ಲರೂ ನನ್ನನ್ನು ನೋಡುತ್ತಿರುವಂತೆ ಭಾಸವಾಗಿತು.

ಅದಾಗಲೇ ನಿರ್ಧರಿಸಿಬಿಟ್ಟೆ ನೃತ್ಯ ತರಗತಿಗೆ ಸೇರಬೇಕು ಎಂದು. ಕಾಲೇಜಿನಲ್ಲಿಯೇ ಸೇರಿಕೊಂಡೆ. ನಂತರ ಎಲ್ಲರೂ ತಮ್ಮ ಜೋಡಿಗಳ ಜತೆ ಡಾನ್ಸ್‌ ಮಾಡುತ್ತಿರುವುದು ನೋಡಿ ಖುಷಿಯಾಗುತ್ತಿತ್ತು. ನನಗೂ ಒಂದು ಜೋಡಿ ಬೇಕು ಎನ್ನಿಸುತು. ಆದರೆ ಅದು ಕೇವಲ ಡಾನ್ಸ್‌ ಜೋಡಿಯಾಗಿರಲೇ ಲೈಫ್‌ ಪಾರ್ಟನರ್‌ ಆಗಬೇಕು ಎನ್ನಿಸಿತು.

ಅದೇ ಸಮಯದಲ್ಲಿ ನನಗೊಬ್ಬ ಹುಡುಗಿ ಸಿಕ್ಕಳು. ನನ್ನ ನೃತ್ಯದ ಆಸೆಯನ್ನು ಅವಳ ಎದುರು ತೆರೆದಿಟ್ಟಾಗ ಅವಳೂ ನೃತ್ಯಕ್ಕೆ ಒಪ್ಪಿದಳು. ಮೂರು ತಿಂಗಳ ನಂತರ ನಮ್ಮ ಮದುವೆಯಾಯಿತು. ಅಲ್ಲಿಂದ ಇಲ್ಲಿಯವರೆಗೂ ನೃತ್ಯವೇ ನಮ್ಮ ಉಸಿರು ಆಗಿದೆ.

ಈಗ ಎಲ್ಲಿ ಹೋದರೂ ನಮ್ಮನ್ನು ಡಾನ್ಸಿಂಗ್‌ ಕಪಲ್‌ ಎಂದೇ ಕರೆಯುತ್ತಾರೆ. ಬೇರೆಯವರು ಏನು ಹೇಳುತ್ತಾರೆ ಎನ್ನುವುದನ್ನು ನಾವು ಯೋಚನೆಯನ್ನೇ ಮಾಡುವುದಿಲ್ಲ. ಡಾನ್ಸ್‌ ಮಾಡುತ್ತೇವೆ, ಖುಷಿ ಪಡುತ್ತೇವೆ ಅಷ್ಟೇ. ಇದೇ ನೃತ್ಯವೇ ನಮ್ಮನ್ನು ಇಷ್ಟು ವರ್ಷವೂ ಸಂತೋಷದ ಸಂಸಾರದಿಂದ ಇರುವಂತೆ ಮಾಡಿದೆ. ಡಾನ್ಸ್‌ ಬಿಟ್ಟು ಒಬ್ಬರೂ ಲುಡೋ ಆಡುತ್ತೇವೆ. ಅವರೇ ಹೆಚ್ಚಾಗಿ ಗೆದ್ದರೂ ಒಮ್ಮೊಮ್ಮೆ ನನ್ನನ್ನೂ ಗೆಲ್ಲಿಸುತ್ತಾಳೆ. ಇದೇ ನಮ್ಮ ಲವ್‌ ಸೀಕ್ರೇಟ್‌ ಎಂದು ಬರೆದುಕೊಂಡಿದ್ದಾರೆ.

ಈ ದಂಪತಿಯ ಮಗಳು ಗೀತಾನಾ ಸಿಂಗ್‌ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಶೇರ್‌ ಮಾಡಿದ್ದಾರೆ. ಜತೆಗೆ ತಮ್ಮ ಅಪ್ಪ-ಅಮ್ಮನ ಡಾನ್ಸ್‌ ವಿಡಿಯೋ ಕೂಡ ಹಾಕಿದ್ದಾಳೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net