Union Budget 2025: ಬಿಜೆಪಿಯ ಬಜೆಟ್ ಕಾಂಗ್ರೆಸ್ಸಿನಂತಿದೆ: BSP ಮುಖ್ಯಸ್ಥೆ ಮಾಯಾವತಿ ಟೀಕೆ

dk (50)
Published on

Union Budget 2025:ಈ ಬಾರಿಯ 2025-26ರ ಕೇಂದ್ರ ಬಜೆಟ್​ ಅನ್ನು ಶನಿವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿದ್ದು, ಇದೀಗ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.

ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಬಹುಜನ ಸಮಾಜ ಪಾರ್ಟಿ(BSP)ಮುಖ್ಯಸ್ಥೆ ಬಿಜೆಪಿಯ ಬಜೆಟ್ ಕಾಂಗ್ರೆಸ್ಸಿನಂತಿದೆ ಎಂದು ಟೀಕೆ ಮಾಡಿದ್ದಾರೆ.

''ದೇಶದಲ್ಲಿ ಹಣದುಬ್ಬರ, ಬಡತನ, ನಿರುದ್ಯೋಗದ ಈ ದೇಶದ ದೊಡ್ಡ ಸಮಸ್ಯೆಗಳಾಗಿವೆ. ರಸ್ತೆ, ನೀರು, ಶಿಕ್ಷಣ, ಶಾಂತಿ ಮುಂತಾದ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಭಾರತದಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನು ಕೇಂದ್ರ ಬಜೆಟ್‌ ಮೂಲಕವೂ ಪರಿಹರಿಸಬೇಕು. ಆದರೆ ಈಗಿನ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಕಾಂಗ್ರೆಸ್‌ನಂತೆಯೇ ರಾಜಕೀಯ ಹಿತಾಸಕ್ತಿ ಹೆಚ್ಚು ಮತ್ತು ಜನರ ಮತ್ತು ದೇಶದ ಹಿತಾಸಕ್ತಿ ಕಡಿಮೆಯಾಗಿದೆ'' ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

''ರೈತರು, ಬಡವರು, ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಮಕ್ಕಳ ಶಿಕ್ಷಣ, ಪೌಷ್ಟಿಕತೆ ಸೇರಿದಂತೆ ಇನ್ನೋವೇಶನ್ ಮತ್ತು ಹೂಡಿಕೆಯವರೆಗಿನ ಪ್ರತಿಯೊಂದು ವಲಯವನ್ನು ಒಳಗೊಂಡಿರುವ ಈ ಬಜೆಟ್ ಸ್ವಾವಲಂಬಿ ಭಾರತಕ್ಕೆ ಮಾರ್ಗಸೂಚಿಯಾಗಿದೆ. ಈ ಎಲ್ಲವನ್ನು ಒಳಗೊಂಡ ಮತ್ತು ದೂರದೃಷ್ಟಿಯ ಬಜೆಟ್‌ಗಾಗಿ ನಾನು ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ'' ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net