ಕೇಂದ್ರ ಬಜೆಟ್ 2025: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಪೂರ್ಣ ಪಟ್ಟಿ…Budget 2025

Budget 2025
Published on

Budget 2025 : ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಎರಡನೇ ಪೂರ್ಣ ಬಜೆಟ್ ಅನ್ನು ಇಂದು (ಫೆ. 01) ಮಂಡಿಸಿದೆ. ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 8ನೇ ಆಯವ್ಯಯದಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಮಧ್ಯಮ ವರ್ಗಕ್ಕೆ ಹೆಚ್ಚಿನ ಹೊತ್ತು ನೀಡಲಾಗಿದೆ. ತೆರಿಗೆಯಲ್ಲೂ ಸಂಬಳದಾದರರಿಗೆ ಬಿಗ್​ ರಿಲೀಫ್​ ನೀಡಿದ್ದಾರೆ.

ಬಜೆಟ್​ನಲ್ಲಿ ಕೆಲವು ಸುಂಕಗಳು ಮತ್ತು ತೆರಿಗೆಗಳಲ್ಲಿ ಬದಲಾವಣೆ ಮಾಡಿರುವುದರಿಂದ ಕೆಲವು ವಸ್ತುಗಳು ಅಗ್ಗವಾಗುತ್ತವೆ ಮತ್ತು ಕೆಲವು ದುಬಾರಿಯಾಗುತ್ತವೆ. ಹೀಗಾಗಿ ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.

ಯಾವುದು ಅಗ್ಗ?

* ಮೊಬೈಲ್ ಫೋನ್‌ಗಳು: ಮೊಬೈಲ್ ಫೋನ್ ಬ್ಯಾಟರಿ ಉತ್ಪಾದನೆಗೆ 28 ​​ಹೆಚ್ಚುವರಿ ಸರಕುಗಳು, ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯಲ್ಲಿ ಬರಲಿವೆ.

* 36 ಜೀವರಕ್ಷಕ ಡ್ರಗ್ಸ್​ ಮತ್ತು ಔಷಧಿಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಗೆ ಸೇರಿಸಲಾಗುವುದು.

* ಇವಿ ಬ್ಯಾಟರಿಗಳು

* ಫ್ರೋಜನ್ ಫಿಶ್ ಪೇಸ್ಟ್ (ಸುರಿಮಿ): ಅನಲಾಗ್ ಉತ್ಪನ್ನಗಳ ತಯಾರಿಕೆ ಮತ್ತು ರಫ್ತಿಗೆ ಫ್ರೋಜನ್ ಫಿಶ್ ಪೇಸ್ಟ್ (ಸುರಿಮಿ) ಮೇಲಿನ ಕಸ್ಟಮ್ಸ್ ಸುಂಕವನ್ನು 30% ರಿಂದ 5% ಕ್ಕೆ ಇಳಿಸಲಾಗುವುದು.

* ವೆಟ್ ಬ್ಲೂ ಲೆದರ್

* ಕ್ಯಾರಿಯರ್​ ಗ್ರೇಡ್​ ಈಥರ್ನೆಟ್ ಸ್ವಿಚ್‌ಗಳು

* 12 ಕ್ರಿಟಿಕಲ್​ ಮಿನರಲ್ಸ್​

* ಎಲ್‌ಸಿಡಿ/ಎಲ್‌ಇಡಿ ಟಿವಿಗಳ ತೆರೆದ ಸೆಲ್ಸ್​

* ಹಡಗುಗಳನ್ನು ತಯಾರಿಸುವ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಇನ್ನೂ 10 ವರ್ಷಗಳ ಕಾಲ ವಿನಾಯಿತಿ ನೀಡಲಾಗಿದೆ.

* ಸಮುದ್ರ ಉತ್ಪನ್ನಗಳು

* ಕೋಬಾಲ್ಟ್ ಉತ್ಪನ್ನಗಳು

* ಎಲ್​ಇಡಿ

* ಲಿಥಿಯಂ-ಐಯಾನ್ ಬ್ಯಾಟರಿ, ಸೀಸ, ಸತು ಮತ್ತು ಇತರ 12 ಪ್ರಮುಖ ಖನಿಜಗಳ ಸ್ಕ್ರ್ಯಾಪ್.

ಯಾವುದು ದುಬಾರಿ?

* ಫ್ಲಾಟ್ ಪ್ಯಾನಲ್ ಡಿಸ್ಪ್ಲೇ

* ಹೆಣೆದ ಬಟ್ಟೆಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net