

Union Budget 2025: ಸಂಸತ್ತಿನಲ್ಲಿ ವಿರೋಧ ಪಕ್ಷದ ಗದ್ದಲದ ನಡುವೆ ಈ ಬಾರಿಯ 2025-26ರ ಕೇಂದ್ರ ಬಜೆಟ್ ಮಂಡನೆ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮೊದಲು ಕೃಷಿ ವಲಯದ ಬಗ್ಗೆ ಅವಯವ್ಯ ಮಂಡಿಸಿದರು.
ಈ ಬಜೆಟ್ನಲ್ಲಿ ಬಡವರು, ಯುವಕರು, ರೈತರು, ಮಹಿಳೆಯರ ಅಭಿವೃದ್ಧಿ ಸೇರಿದಂತೆ ಒಟ್ಟು ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದೀಗ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳು ಮಂಡನೆ ಇಲ್ಲಿದೆ...
ದೇಶದ ಮೊದಲ ಇಂಜಿನ್ ಕೃಷಿ ವಲಯ ಎಂದು ಹೇಳುವ ಮೂಲಕ ಪ್ರಧಾನಿ ಧನ್ಧಾನ್ಯ ಕೃಷಿ ಯೋಜನೆ ವಿಸ್ತರಣೆಗೆ ಒತ್ತು ನೀಡಲಾಗಿದೆ. ಮುಂದಿನ 5 ವರ್ಷಕ್ಕೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅಡಿಯಲ್ಲಿ 1.7 ಕೋಟಿ ರೈತರಿಗೆ ಇದರಿಂದ ನೆರವಾಗಲಿದೆ ಎಂದರು. ಅಲ್ಲದೆ, ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್ ಅಪ್ ಗಳಿಗೆ 10ಕೋಟಿಯಿಂದ 20ಕೋಟಿವರೆಗೂ ಕಡಿಮೆ ಬಡ್ಡಿ ಸಾಲ. ಮೈಕ್ರೋ ಕಂಪನಿಗಳಿಗೆ 5 ಲಕ್ಷವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ಇಂಥ 10 ಲಕ್ಷ ಕಾರ್ಡ್ ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗಿದೆ ಎಂದರು.
ಬಿಹಾರದಲ್ಲಿ ಮಖಾನ ಬೋರ್ಡ್(ತಾವರೆ ಬೀಜ) ಸ್ಥಾಪನೆ ಮಾಡಲಾಗುವುದು. ಮಖಾನ ಅಭಿವೃದ್ಧಿಗೆ ತರಬೇತಿ ನೀಡುವುದು. ಮಖಾನಗೆ ಕಮರ್ಷಿಯಲ್ ಲಭ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.(ಏಜೆನ್ಸೀಸ್)