'ಇದು ನಿಮ್ಮ ಕಲ್ಪನೆಗಾಗಿ'; 'ಯುಐ' ಟೀಸರ್​ ನೋಡಿ ಫ್ಯಾನ್ಸ್​ ಶಾಕ್!

Untitled design - 2023-09-18T184541.990
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ರಿಯಲ್​ ಸ್ಟಾರ್, ನಟ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ಬಹುನಿರೀಕ್ಷಿತ 'ಯುಐ' ಸಿನಿಮಾದ ಟೀಸರ್​ ಇಂದು ಊರ್ವಶಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದು, ಇದೀಗ ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ವೀಕ್ಷಕರ ಮುಂದೆ ಹಾಜರಾಗಿದೆ.

ನಿರ್ದೇಶಕ ಉಪೇಂದ್ರ ಅವರ 'ಯುಐ' ಟೀಸರ್​ಗೆ ಬಹು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಟೀಸರ್​ ಅಧಿಕೃತವಾಗಿ ತೆರೆ ಕಂಡಿದೆ. ಸೆ.18 ರಂದು ಉಪ್ಪಿ ಜನ್ಮದಿನದಂದು ಬಿಡುಗಡೆಗೊಳಿಸಲು ಯೋಜನೆ ನಡೆಸಿದ್ದ ಚಿತ್ರತಂಡ, ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆಂದೇ ವಿಶೇಷ ಕಾರ್ಯಕ್ರವನ್ನು ಆಯೋಜಿಸಿತ್ತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್, 'ಯುಐ'​ ಚಿತ್ರದ ಟೀಸರ್​ ಅನಾವರಣಗೊಳಿಸಿದರು. ಇಂದು 6:30ರ ವೇಳೆಗೆ ಲಹರಿ ಫಿಲ್ಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡ ಟೀಸರ್​ ನೋಡಿದ ಅಭಿಮಾನಿಗಳು ಇದೀಗ ಶಾಕ್ ಆಗಿದ್ದಾರೆ.

ಟೀಸರ್​ನಲ್ಲಿ ಟೈಟಲ್​ ಕಾರ್ಡ್​ ಬಂದ ನಂತರ ಇಡೀ ಸ್ಕ್ರೀನ್​ ಬ್ಲ್ಯಾಂಕ್​ ಆಗಿ ಮೂಡಿಬಂದಿದ್ದು, ಕಡೆಯಲ್ಲಿ ಯುಐ ಟೀಸರ್​ ನಿಮ್ಮ ಕಲ್ಪನೆಗಾಗಿ ಎಂದು ಹೇಳಿದ್ದಾರೆ. ಈ ಮೂಲಕ ಉಪೇಂದ್ರ ತಮ್ಮ ಅಭಿಮಾನಿಗಳು ಮತ್ತು ಎಲ್ಲರ ತಲೆಗೆ ಮತ್ತೊಮ್ಮೆ ಹುಳ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net