

ಮೀರತ್: ಕಳ್ಳತನವೆಂದಾಕ್ಷಣ ಹಣ, ಚಿನ್ನಾಭರಣ ನಿಮ್ಮ ತಲೆಗೆ ಬರಬಹುದು. ಆದರೆ ಈ ಕಳ್ಳರು ಹಾಗಲ್ಲ. ಇವರು ಕದ್ದಿದ್ದು ಚಿನ್ನ ಅಥವಾ ಹಣವನ್ನಲ್ಲ. ಹೆಣ್ಣು ಮಕ್ಕಳು ತೊಳೆದು ಒಣೆಸಿದ್ದ ಒಳಉಡುಪು ಕದ್ದು ಪೂರ್ತಿ ಸಮಾಜದೆದುರು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ ಈ ಯುವಕರು.
ಉತ್ತರ ಪ್ರದೇಶದ ಮೀರತ್ನಲ್ಲಿ ಇಂತದ್ದೊಂದು ಕಳ್ಳತನ ನಡೆದಿದೆ. ಮಾರ್ಚ್ 14ರಂದು ಮೊಹಮದ್ ಅಬ್ದುಲ್ಲ ಹೆಸರಿನ ಯುವಕ ತನ್ನ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಬಂದು ಒಂದು ಮನೆಯ ಬಳಿ ಗಾಡಿ ನಿಲ್ಲಿಸುತ್ತಾನೆ. ಅಲ್ಲೇ ಒಣಹಾಕಲಾಗಿದ್ದ ಹೆಣ್ಣು ಮಕ್ಕಳ ಒಳಉಡುಪನ್ನು ಎತ್ತಿಕೊಂಡು ಬಂದು ಅದನ್ನು ಗಾಡಿಯೊಳಗೆ ಇಟ್ಟುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಕತ್ ವೈರಲ್ ಆಗಿದೆ.
ಸಂಜಯ್ ಚೌಧರಿ ಎಂಬ ನಿವಾಸಿಯು ಅದೇ ದಿನದಂದು ಸದರ್ ಬಜಾರ್ ಪೊಲೀಸರಿಗೆ ಈ ಕುರಿತಾಗಿ ದೂರು ನೀಡಿದ್ದಾರೆ. ಯುವಕರು ನನ್ನ ಮಕ್ಕಳ ಒಳಉಡುಪು ಕದ್ದಿರುವುದನ್ನು ನಾನೇ ವಿಡಿಯೋ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಬ್ದುಲ್ಲ ಮತ್ತು ಆತನ ಸ್ನೇಹಿತ ರೋಮಿನ್ ಅನ್ನು ವಶಕ್ಕೆ ಪಡೆಯಲಾಗಿದೆ. ತಮಾಷೆಗಾಗಿ ಒಳಉಡುಪು ಕದ್ದಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)