ಅಪ್ಪ ಅಮ್ಮನಿಗೆ ಕನ್ನಡದಲ್ಲೇ ವಿಷ್​ ಮಾಡಿದ ಅನುಷ್ಕಾ ಶೆಟ್ಟಿ! ನಿಜವಾದ ಕನ್ನಡ ಪ್ರೇಮವೆಂದರೆ ಇದೇ ಎಂದ ನೆಟ್ಟಿಗರು

anushka
Published on

ಹೈದರಾಬಾದ್​: ಕನ್ನಡ ಪ್ರೇಮ ತೋರಿಕೆಯಾಗಬಾರದು, ಮನಸಲ್ಲಿರಬೇಕು ಎನ್ನುವುದು ಅನೇಕರ ವಾದ. ಅದೇ ರೀತಿ ಮನಸ್ಸಿನಲ್ಲಿ ಕನ್ನಡವನ್ನು ಸದಾ ಆರಾಧಿಸುವ ನಟಿ ಅನುಷ್ಕಾ ಶೆಟ್ಟಿ. ಅವರ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೂ ಕನ್ನಡದಲ್ಲೇ ವಿಷ್​ ಮಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ.

ಮಂಗಳೂರು ಮೂಲದ ಅನುಷ್ಕಾ ಶೆಟ್ಟಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅವರ ತಂದೆ ವಿಠಲ ಶೆಟ್ಟಿ ಮತ್ತು ತಾಯಿ ಪ್ರಫುಲ್ಲ ಅವರು ಮಂಗಳವಾರದಂದು ಮದುವೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಶುಭ ದಿನದಂದು ಅನುಷ್ಕಾ ಅವರು ಅಪ್ಪ ಅಮ್ಮನಿಗೆ ತಮ್ಮ ಫೇಸ್​ಬುಕ್​ ಖಾತೆ ಮೂಲಕ ವಿಷ್​ ಮಾಡಿದ್ದಾರೆ. ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಪಪ್ಪ ಮತ್ತು ಅಮ್ಮ ಎಂದು ಪ್ರೀತಿಯಿಂದ ಶುಭ ಹಾರೈಸಿದ್ದಾರೆ.

ಅನುಷ್ಕಾ ಅವರ ಈ ಪೋಸ್ಟ್​ ಸಕತ್​ ವೈರಲ್​ ಆಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೇರೆ ರಾಜ್ಯದಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದರೂ ಅವರಿಗೆ ಕನ್ನಡ ಪ್ರೇಮ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದು ಅವರ ಅಭಿಮಾನಿಗಳು ಹೊಗಳಲಾರಂಭಿಸಿದ್ದಾರೆ. ಇದುವೇ ನಿಜವಾದ ಕನ್ನಡ ಪ್ರೀತಿ ಎಂದು ಬಣ್ಣಿಸಲಾರಂಭಿಸಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net