ಡಿಎನ್​ಎಯಲ್ಲಿ ಗೊತ್ತಾಯ್ತು ಅಪ್ಪನ 30 ಮಕ್ಕಳ ಭಯಾನಕ ಸತ್ಯ... ತಂಗಿಯಲ್ಲಿ ಒಬ್ಳು ಇವನದ್ದೇ ಲವರ್​!

children
Published on

ಲಂಡನ್​: ಇಲ್ಲೊಂದು ವಿಚಿತ್ರ ಕೇಸ್​ನಲ್ಲಿ ಯುವಕನೊಬ್ಬ ಸಿಲುಕಿ ಇದೀಗ ಒದ್ದಾಡುತ್ತಿದ್ದಾನೆ. ತನ್ನ ಅಪ್ಪನಿಗೆ ತಾನೊಬ್ಬನೇ ಮಗ ಎಂದುಕೊಂಡಿದ್ದ ಈತನಿಗೆ ಯಾರೂ ನಂಬಲು ಸಾಧ್ಯವಾಗದಂಥ ಭಯಾನಕ ಸತ್ಯ ಗೊತ್ತಾಗಿದೆ.

ಅದೇನೆಂದರೆ ತಮಗೆ ಇನ್ನೂ ಒಂದು, ಎರಡು, ಮೂರು ಅಲ್ಲ... ಬರೋಬ್ಬರಿ 30 ಸಹೋದರ, ಸಹೋದರಿಯರು ಇರುವ ಸತ್ಯ ಇದೀಗ ತಿಳಿದು ಬಂದಿದ್ದು, ಇನ್ನೂ ಎಷ್ಟು ಮಂದಿ ಇರಬಹುದು ಎಂದು ಹುಡುಕಾಟ ನಡೆಸಿದ್ದಾನಂತೆ! ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ.

ವಿಚಿತ್ರ ಎಂದರೆ ಇವನು ಯಾರು ತನ್ನ ತಂದೆ ತಿಳಿದುಕೊಂಡಿದ್ದನೋ ಅವನು ಇವನ ತಂದೆಯಲ್ಲವಂತೆ. ಬೇರೆಯೊಬ್ಬನು ಇವರ ತಂದೆಯಂತೆ. ಆ ತಂದೆಗೆ ಇವನೂ ಸೇರಿ 31 ಮಂದಿ ಮಕ್ಕಳಂತೆ. ಇನ್ನೂ ವಿಚಿತ್ರ ಎಂದರೆ ಈತನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದು, ಆಮೇಲೆ ನೋಡಿದರೆ ಆಕೆಯ ಡಿಎನ್​ಎ ಗೂ ಈತನ ಡಿಎನ್​ಎಗೂ ಮ್ಯಾಚ್​ ಆಗುತ್ತಿದೆ. ಇದರ ಅರ್ಥ, ಆ ಯುವತಿ ಕೂಡ ತಂದೆಯ ಮಗಳು ಅರ್ಥಾತ್​ ಈತನ ತಂಗಿ!

ಇಂಥದ್ದೊಂದು ವಿಚಿತ್ರ ನಡೆದಿರುವುದು ಲಂಡನ್​ನಲ್ಲಿ. ಆ್ಯಂಡಿ ನಾಬಿಲ್​ ಎಂಬ ಯುವಕ ಇದೀಗ ತನಗಾಗಿರುವ ಅನ್ಯಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ತೋಡಿಕೊಳ್ಳುತ್ತಿದ್ದಾನೆ.

ಫುಲ್​ ಕನ್​ಫ್ಯೂಷನ್​ ಇದೆಯಲ್ಲವೆ? ಅಸಲಿಗೆ ಆಗಿದ್ದೇನೆಂದರೆ, ಆ್ಯಂಡಿಯ ದಾಖಲೆಯಲ್ಲಿ ತಂದೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯ ಹೆಸರು ಇದ್ದು, ಅವನೇ ತಂದೆಯೆಂದುಕೊಂಡಿದ್ದ ಆ್ಯಂಡಿ. ಅವರೆಲ್ಲರೂ ಒಟ್ಟಿಗೇ ಇದ್ದರು. ಆದರೆ ಅದೊಂದು ದಿನ ಆ್ಯಂಡಿಗೆ ಏನೋ ಸಂದೇಹ ಬಂದು ಡಿಎನ್​ಎ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಆಗಲೇ ಅಸಲಿಯತ್ತು ಗೊತ್ತಾಗಿ ಈತ ತನ್ನ ತಂದೆಯಲ್ಲ ಎಂದು ತಿಳಿದಿದೆ. ನಂತರ ವಿಚಾರಣೆ ಮಾಡಿದಾಗ ಯಾವುದೋ ವ್ಯಕ್ತಿ ತನ್ನ ವೀರ್ಯವನ್ನು ನೀಡಿದ್ದರಿಂದ ಆ ವೀರ್ಯದಿಂದ ತಾನು ಹುಟ್ಟಿದ್ದು ಎಂದು ತಿಳಿದಿದೆ.

ತನ್ನ ಅಸಲಿ ತಂದೆಯನ್ನು ಹುಡುಕಿ ಹೊರಟ ಆ್ಯಂಡಿ ನಂತರ ಈ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಿದಾಗ ವೀರ್ಯ ನೀಡಿದ ವ್ಯಕ್ತಿ ಇನ್ನೂ ಅನೇಕ ಬಾರಿ ಅನೇಕ ಮಹಿಳೆಯರಿಗೆ ವೀರ್ಯದಾನ ಮಾಡಿದ್ದು, ಆ ವೀರ್ಯದಿಂದ ಇನ್ನೂ 30 ಮಕ್ಕಳು ಬೇರೆ ಬೇರೆಯವರಿಗೆ ಹುಟ್ಟಿರುವುದು ತಿಳಿದಿದೆ. ಅಂದರೆ ಅಸಲಿಗೆ ಎಲ್ಲರೂ ಇವನ ಸಹೋದರ, ಸಹೋದರಿಯರು! ಅವರಲ್ಲಿ ಕೆಲವರು ಇವನಿಗೆ ಸಿಕ್ಕಿದ್ದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಆದರೆ ತನ್ನ ಪ್ರೇಮಿ ಕೂಡ ಅದರಲ್ಲಿ ಒಬ್ಬಳು ಎಂದು ತಿಳಿದಿದೆ. ಇದೀಗ ತಾನು ಏನು ಮಾಡಲಿ ಎಂದು ಯುವಕ ಗೋಳಾಡುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net