ಅತ್ತೆಗೆ ಟಿವಿ ಹುಚ್ಚು, ಸೊಸೆಗೆ ಮೊಬೈಲ್​ ಹುಚ್ಚು... ಇಬ್ಬರ ಹುಚ್ಚಿನಲ್ಲಿ ಪೊಲೀಸರು ಸುಸ್ತೋ ಸುಸ್ತು!

in laws
ಸಾಂದರ್ಭಿಕ ಚಿತ್ರ
Published on

ಗೋರಖ್​ಪುರ (ಉತ್ತರ ಪ್ರದೇಶ): ಅತ್ತೆ- ಸೊಸೆ ಜಗಳವಾಡುವುದು ಹೊಸ ವಿಷಯವೂ ಅಲ್ಲ, ಇದರಲ್ಲಿ ಏನೂ ಅಚ್ಚರಿಯೂ ಇಲ್ಲ. ಆದರೆ ಇಲ್ಲೊಂದು ವಿಚಿತ್ರ ಕೇಸ್​ ದಾಖಲಾಗಿದ್ದು, ಅತ್ತೆ- ಸೊಸೆ ಜಗಳದಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.

ಇಂಥದ್ದೊಂದು ವಿಚಿತ್ರ ಕೇಸ್​ ನಡೆದಿರುವುದು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ. ಪೊಲೀಸರಿಗೆ ಕರೆ ಮಾಡಿರುವ ಸೊಸೆ ತನಗೆ ರಕ್ಷಣೆ ಕೊಡಿ ಎಂದು ಕೋರಿಕೊಂಡಿದ್ದಾಳೆ. ಅದಕ್ಕೆ ಆಕೆ ನೀಡಿರುವ ಕಾರಣ ಎಂದರೆ ಅತ್ತೆಗೆ ವಿಪರೀತ ಟೀವಿ ಹುಚ್ಚು. ಆದ್ದರಿಂದ ದಿನವೂ ತಂಗಳನ್ನ ನಾನು ತಿನ್ನಬೇಕಿದೆ. ಇದರಿಂದ ನನ್ನ ಆರೋಗ್ಯ ಕೆಡುತ್ತಿದೆ. ಅತ್ತೆಗೆ ಬುದ್ಧಿ ಹೇಳಿ ಎಂದು ಕೋರಿಕೊಂಡಿದ್ದಾಳೆ.

ಪೊಲೀಸರು ಸೊಸೆಯ ಮಾತು ಕೇಳಿ ನಕ್ಕು ಸುಮ್ಮನಾಗಲಾದೀತೆ? ಕೌಟುಂಬಿಕ ದೌರ್ಜನ್ಯ ಬೇರೆ ಎಂದು ಹೇಳುತ್ತಿದ್ದಾಳೆ ಸೊಸೆ, ಅದಕ್ಕಾಗಿ ವಿಚಾರಣೆಗೆಂದು ಮನೆಗೆ ಹೋಗಿದ್ದಾರೆ. ಆಗ ಅತ್ತೆಯ ವರ್ಷನ್​ ಕೇಳಬೇಕಲ್ಲ. ಅತ್ತೆಯನ್ನು ವಿಚಾರಿಸಿದಾಗ ಅದಕ್ಕೆ ಅವರು, ಸೊಸೆಯ ತಲೆ ಸರಿಯಿಲ್ಲ. ನಾನು ಪ್ರತಿ ದಿನ ಅಡುಗೆ ಮಾಡಿ ಫ್ರೆಷ್​ ಆಗಿರಯೇ ನೀಡುತ್ತಿದ್ದೇನೆ. ಆದರೆ ಆಕೆ ಸದಾ ಮೊಬೈಲ್​ನಲ್ಲಿ ಬ್ಯಸಿಯಾಗಿರುತ್ತಾಳೆ, ಅವಳಿಗೆ ಮೊಬೈಲ್​ ಹುಚ್ಚು. ಅವಳದ್ದೇ ತಪ್ಪಿಗೆ ಎಂದಿದ್ದಾರೆ.

ಸೊಸೆಯ ಮಾತು ಕೇಳಲು ಹೋದರೆ ಅತ್ತೆ ಅಡ್ಡಿ ಬರೋದು, ಅತ್ತೆ ಮಾತು ಕೇಳಲು ಹೋದರೆ ಸೊಸೆ ಅಡ್ಡಿಬರೋದು ನೋಡಿ ಪೊಲೀಸರಿಗೆ ಹುಚ್ಚುಹಿಡಿದಂತಾಯಿತಂದೆ.

ಅಷ್ಟಕ್ಕೂ ಈ ಮನೆಯಲ್ಲಿ ಅತ್ತೆ, ಸೊಸೆ ಮಾತ್ರ ಇರುವುದು. ಇವರ ಗಂಡಂದಿರು ಬೇರೆ ದೂರುಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದ್ದರಿಂದ ದಿನವೂ ಇಬ್ಬರ ನಡುವೆ ಕಿರಿಕಿರಿ, ಮಾರಾಮಾರಿ. ಅಂತೂ ಇವರಿಬ್ಬರನ್ನೂ ಒಟ್ಟಿಗೇ ಕುಳ್ಳರಿಸಿ ಬುದ್ಧಿಮಾತು ಹೇಳಿ ಸದ್ಯ ಪೊಲೀಸರು ಅಲ್ಲಿಂದ ವಾಪಸಾಗಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net