ಏಲಿಯನ್‌ ಥರ ಕಾಣಿಸಲು ಮೂಗು, ತುಟಿ, ಕಿವಿ, ನಾಲಿಗೆ ಕತ್ತರಿಸಿಕೊಂಡ- ಎಲ್ಲವೂ ಅಮ್ಮನಿಗಾಗಿಯಂತೆ!

alien
Published on

ವಾಷಿಂಗ್ಟನ್: ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಜನರು ಇರುತ್ತಾರೆ ಎಂದು ಹೇಳುವುದೇ ಕಷ್ಟ. ಇಲ್ಲೊಬ್ಬ ಆಸಾಮಿಯ ಕಥೆ ವಿಚಿತ್ರ ಮಾತ್ರವಲ್ಲ, ಭಯಾನಕವೂ ಆಗಿದೆ.

ಏಲಿಯನ್‌ ಶಬ್ದವನ್ನು ಬಹುತೇಕ ಎಲ್ಲರೂ ಕೇಳಿಯೇ ಇದ್ದೇವೆ. ಏಲಿಯನ್‌ ಎನ್ನುವುದು ಇದೆ ಎಂದು ಇದಾಗಲೇ ಹಲವಾರು ಸಂಶೋಕರು ಹೇಳಿದ್ದರೂ ಇವುಗಳ ಇರುವಿಕೆ ಕುರಿತಂತೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಏಲಿಯನ್‌ ಎಂದರೆ ಇದೇ ರೀತಿ ಇರುತ್ತದೆ ಎಂಬ ಚಿತ್ರದ ಪರಿಕಲ್ಪನೆಯಂತೂ ಬಂದಾಗಿದೆ.

ಇಂಥದ್ದೇ ಏಲಿಯನ್‌ ಥರ ಕಾಣುವ ಇಚ್ಛೆ ವ್ಯಕ್ತಪಡಿಸಿರುವ 32 ವರ್ಷದ ಯುವಕನೊಬ್ಬ ತನ್ನ ಮೂಗು, ಉಬ್ಬು, ಕಿವಿ, ತುಟಿ ಹಾಗೂ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ!

ಇಂಥದ್ದೊಂದು ವಿಪರೀತ ಎನಿಸುವ ಹುಚ್ಚು ಸಾಹಸಕ್ಕೆ ಕೈಹಾಕಿರುವವರು ಅಂಥೋನಿ ಲಫ್ರೆಡೊ ಎಂಬಾತ. ತಮಗಿಷ್ಟವಾಗಿರುವ ಟ್ಯಾಟೂಗಳನ್ನು ಶರೀರವನ್ನೆಲ್ಲಾ ನೋವು ಮಾಡಿಸಿಕೊಂಡು ಚುಚ್ಚಿಕೊಳ್ಳುವವರು ಇದ್ದಾರೆ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಅಂಥೋನಿ, ಮೈತುಂಬಾ ಏಲಿಯನ್‌ ರೀತಿ ಟ್ಯಾಟೂ ಹಾಕಿಸಿಕೊಂಡು ದೇಹದ ಪೂರ್ತಿ ಚುಚ್ಚಿಸಿಕೊಂಡಿರುವುದು ಸಾಲದು ಎಂಬಂತೆ ತನ್ನ ಅಂಗಾಂಗಗನ್ನೆಲ್ಲಾ ಕತ್ತರಿಸಿಕೊಂಡಿದ್ದಾನೆ!

ತನ್ನ ತಾಯಿಯ ಹುಟ್ಟುಹಬ್ಬದಂದು ಏನಾದರೊಂದು ಡಿಫರೆಂಟ್‌ ಆಗಿ ನೀಡಬೇಕು ಎಂದು ಎನಿಸಿ ಹೀಗೆ ಮಾಡಿದ್ದಾನಂತೆ ಈತ. ಇನ್ನೂ ವಿಚಿತ್ರ ಎಂದರೆ ಇದಕ್ಕೆ ತಾಯಿ ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರಂತೆ!

ಏಲಿಯನ್ ಮಾದರಿ ಕಾಣಲು ಆಂಥೋನಿ ಲೋಫ್ರೆಡೋ ತನ್ನ ದೇಹದ ಮೇಲಿನ ಚರ್ಮವನ್ನು ತೆಗೆದು ಮೆಟಲ್ ಅಂಟಿಸಿಕೊಂಡಿದ್ದು, ತನ್ನ ತೋಳು, ಕೈ ಕಾಲು, ಬೆರಳು ಹಾಗೂ ತಲೆಯ ಹಿಂಭಾಗ ಕೂಡ ಬದಲಾವಣೆ ಮಾಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ದೇಹದಲ್ಲಿ ಮಾಡಿಕೊಂಡ ಬದಲಾವಣೆಗಳ ಕುರಿತಂತೆ ಯಾವುದೇ ಬೇಸರವಾಗಿಲ್ಲ ಎಂದು ತಿಳಿಸಿದ್ದಾನೆ.

ನನ್ನನ್ನು ನೋಡಿದಾಗ ನಿಮಗೆ ಕನಸಿನಂತೆ ಕಾಣಿಸಬಹುದು. ಆದರೆ ನಾನು ನಿಮ್ಮ ಮುಖದಲ್ಲಿ ನಗೆಬೀರಿಸಲು ಪ್ರಯತ್ನಿಸುತ್ತೇನೆ. ನೀವು ನನ್ನ ಮೊದಲ ಗೆಲುವು ಎಂದು ಕ್ಯಾಪ್ಷನ್ ಹಾಕಿಕೊಂಡಿರುವ ಈತ ತಾಯಿಯ ಜತೆಗಿನ ತನ್ನ ವಿಚಿತ್ರ ವೇಷವನ್ನು ಶೇರ್‌ ಮಾಡಿಕೊಂಡಿದ್ದಾನೆ.

ಮೂಗು, ನಾಲಿಗೆ ಸೇರಿಂದ ತನ್ನ ಅಂಗಗಳನ್ನು ಕತ್ತರಿಸಿಕೊಂಡಿದ್ದ ವೇಳೆ ಈತ ಮಾತನಾಡಲು ಬಹಳ ಕಷ್ಟಪಟ್ಟಿದ್ದರೂ ತಾನು ಏಲಿಯನ್‍ನಂತೆ ಕಾಣಿಸುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾನೆ, .ಬ್ಲ್ಯಾಕ್‌ ಏಲಿಯನ್ ಪ್ರಾಜೆಕ್ಟ್ ಎಂಬ ಹೆಸರಿನಲ್ಲಿ ಈತ ತನ್ನ ದೇಹದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ, ಇನ್‍ಸ್ಟಾಗ್ರಾಮ್‍ನಲ್ಲಿ ಖಾತೆಯಲ್ಲಿ 3.45 ಲಕ್ಷ ಮಂದಿ ಫಾಲೋವರ್ಸ್‍ಗಳನ್ನು ಹೊಂದಿದ್ದಾನೆ ಈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net