More

    ಮದುವೆ ಮುಗೀತಿದ್ದಂಗೆ ಪೊಲೀಸ್ರು ಕೊಟ್ರು ಎಂಟ್ರಿ- ವರನ ಕಡೆಯವರಿಗೆ ಹಾಕಿದ್ರು 50 ಸಾವಿರ ರೂ. ದಂಡ!

    ಮುಂಬೈ: ಇದೀಗ ಕರೊನಾದ ಅಟ್ಟಹಾಸ ಮತ್ತೆ ಶುರುವಾಗಿದೆ. ಎರಡನೆಯ ಅಲೆಯ ದೇಶಕ್ಕೆ ಕಾಲಿಟ್ಟಾಗಿದೆ. ಹಲವಾರು ಕಡೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಎಲ್ಲವೂ ಜಾರಿಯಾಗಿದೆ. ಇದರ ಬೆನ್ನಲ್ಲೇ ಇಷ್ಟು ದಿನ ಸಡಿಲಿಕೆಗೊಳಿಸಿದ್ದ ಕೆಲವೊಂದು ಕರೊನಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

    ಮದುವೆ ಸಮಾರಂಭಗಳಿಗೂ ಕೆಲವೊಂದು ಷರತ್ತು ವಿಧಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಭಾರಿ ದಂಡ ವಿಧಿಸಲಾಗುತ್ತಿದೆ.

    ಮಹಾರಾಷ್ಟ್ರದಲ್ಲಿ ಕರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಮತ್ತೆ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಿದೆ. ಅಲ್ಲದೆ ಈ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಹೇರಲಾಗಿದ್ದ ಕೆಲವೊಂದಷ್ಟು ನಿಯಮಗಳನ್ನು ಮತ್ತೆ ಜಾರಿಗೆ ತಂದಿದೆ. ಮದುವೆ ಸಮಾರಂಭಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಹೇಳಲಾಗಿದೆ.

    ಅದೇ ರೀತಿ , ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ದಂಪತಿಗೆ 50 ಸಾವಿರ ದಂಡ ವಿಧಿಸಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‍ನಲ್ಲಿ ನಡೆದಿದೆ.

    ಮದುವೆ ಮುಗಿಯುತ್ತಿದ್ದಂತೆಯೇ ಎಂಟ್ರಿ ಕೊಟ್ಟಿರುವ ಪೊಲೀಸರು ಈ ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ, ಅಲ್ಲಿ 300ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇದು ಕರೊನಾ ನಿಯಮ ಉಲ್ಲಂಘನೆಯಾಗಿದೆ. ಮಾತ್ರವಲ್ಲದೇ ಎಷ್ಟೋ ಮಂದಿ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಹಾಗಾಗಿ ಮದುವೆ ಆಯೋಜನೆಗೊಳಿಸಿದ್ದ ವರನ ಕಡೆಯವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಹಶೀಲ್ದಾರ್ ಉದ್ಧವ್ ಕದಮ್ ಹೇಳಿದ್ದಾರೆ.

    ಲಸಿಕೆ ಹಾಕಿಸಿಕೊಂಡ ಎರಡನೆಯ ದಿನಕ್ಕೇ ಸಚಿವರಿಗೆ ಬಿಗ್‌ ಶಾಕ್‌- ವರದಿಯಲ್ಲಿ ಕಾಣಿಸಿಕೊಂಡ್ತು ‘ಪಾಸಿಟಿವ್‌’!

    VIDEO: ಬೈಕ್‌ ವ್ಹೀಲಿಂಗ್‌ ಆಯ್ತು… ಈಗ ಶುರುವಾಯ್ತು ಕಾರ್‌ಸ್ಟಂಟ್‌: ‘ಡೇರ್‌ಡೆವಿಲ್’ ಮಾಡಹೋಗಿ ಸಿಕ್ಕಿಬಿದ್ದ ಯುವಕ…

    ಗಂಡ ನನಗೆ ಬೇಕು- ನೀನು ಬೇಡ ಎನ್ನುತ್ತಿದ್ದಾರವರು: ಗೊಂದಲದ ಮನಸ್ಸಿಗೆ ಕಾನೂನಿನಲ್ಲಿ ಪರಿಹಾರವಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts