ಮರಕ್ಕೆ ಬೈಕ್ ಡಿಕ್ಕಿ; ಸ್ಥಳದಲ್ಲೇ ಹದಿನೈದರ ಬಾಲಕರಿಬ್ಬರ ಮರಣ

Bike Tree Accident
Published on

ಗದಗ: ಮೋಜಿಗಾಗಿ ಈಜಿಗಾಗಿ ಬೈಕ್​ನಲ್ಲಿ ಹೋಗಿದ್ದ ಹದಿನೈದು ವರ್ಷದ ಬಾಲಕರಿಬ್ಬರು ಅಲ್ಲಿಂದ ಮರಳುವಾಗ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮರಣಕ್ಕೀಡಾದ ಪ್ರಕರಣವೊಂದು ನಡೆದಿದೆ. ಗದಗ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ಗದಗದ ರೋಣ ನಿವಾಸಿಗಳಾದ ಅನುಪ ಇಟಗಿ (15), ಶ್ರೀಶಾಂತ ಗಡಗಿ (15) ಸಾವಿಗೀಡಾದ ಬಾಲಕರು. ರೋಣ ಪಟ್ಟಣದ ಬಸ್​ ಡಿಪೋ ಬಳಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಇವರ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ.

ಇವರು ಗದಗದ ಅಬ್ಬಿಗೇರಿ ಗ್ರಾಮದ ಬಳಿಯ ಕಲಾಕಾಶಿ ಈಜು‌ಕೊಳ್ಳಕ್ಕೆ ಹೋಗಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net