More

    ಹೆಲ್ಮೆಟ್​ ಧರಿಸದ ಮಹಿಳಾ ಪಿಎಸ್​ಐ; ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು

    ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಪೊಲೀಸರು ಅಡ್ಡಗಟ್ಟಿ ಕೇಸು ದಾಖಲಿಸಿ ದಂಡ ವಿಧಿಸುತ್ತಾರೆ. ಆದರೆ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿದರೆ ಹೇಗೆ? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದರಿಂದ ಇದೀಗ ಮಹಿಳಾ ಪಿಎಸ್​ಐ ಒಬ್ಬರ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗಿದೆ.

    ದ್ವಿಚಕ್ರವಾಹನದಲ್ಲಿ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದ ಮಹಿಳಾ ಸಬ್​ ಇನ್​ಸ್ಟೆಕ್ಟರ್ ಒಬ್ಬರು ಹೆಲ್ಮೆಟ್ ಧರಿಸದೆ ಇರುವುದನ್ನು ಗಮನಿಸಿದ್ದ ವ್ಯಕ್ತಿಯೊಬ್ಬರು ಅದರ ಫೋಟೋ ಹಾಗೂ ವಿಡಿಯೋ ಸಮೇತ ಟ್ವೀಟ್ ಮಾಡಿದ್ದರು. ಅಲ್ಲದೆ, “ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ?” ಎಂದೂ ಪ್ರಶ್ನಿಸಿದ್ದರು.

    ಡಿಜಿಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್ ಹಾಗೂ ಕಬ್ಬನ್​ಪಾರ್ಕ್ ಸಂಚಾರ ಪೊಲೀಸರನ್ನು ಮೆನ್ಷನ್ ಮಾಡಿದ್ದ ಈ ಟ್ವೀಟನ್ನು ಸಾವಿರಾರು ಮಂದಿ ನೋಡುತ್ತಿದ್ದಂತೆ ಎಚ್ಚೆತ್ತುಕೊಂಡ ಕಬ್ಬನ್​ಪಾರ್ಕ್ ಸಂಚಾರ ಪೊಲೀಸರು ಸಂಬಂಧಿತ ಪಿಎಸ್​ಐ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.

    ಸಿಎಂ ಸ್ಥಾನಕ್ಕಾಗಿ ‘ಬಂಡೆ’ದ್ದ ಡಿ.ಕೆ.ಶಿವಕುಮಾರ್​ ಮನವೊಲಿಸಿದ್ಯಾರು?

    ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ; ಡಿ.ಕೆ.ಶಿವಕುಮಾರ್ ಡಿಸಿಎಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts