More

    ಸಿಎಂ ಸ್ಥಾನಕ್ಕಾಗಿ ‘ಬಂಡೆ’ದ್ದ ಡಿ.ಕೆ.ಶಿವಕುಮಾರ್​ ಮನವೊಲಿಸಿದ್ಯಾರು?

    ನವದೆಹಲಿ: ಕಳೆದ ಕೆಲವು ದಿನಗಳಿಂದ ದೊಡ್ಡ ಕಗ್ಗಂಟಾಗಿದ್ದ ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರ ಕೊನೆಗೂ ಬಗೆಹರಿದಿದೆ. ಆದರೆ ಈ ಸ್ಥಾನಕ್ಕಾಗಿ ಬಂಡೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಡಿಸಿಎಂ ಸ್ಥಾನ ಒಪ್ಪುವಂತೆ ಮನವೊಲಿಸಿದ್ಯಾರು ಎಂಬುದೂ ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

    ನನಗೇ ಸಿಎಂ ಸ್ಥಾನ ಕೊಡಬೇಕು ಎಂದು ತಮ್ಮದೇ ಆದ ಕಾರಣ-ಸಮರ್ಥನೆಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಪಟ್ಟು ಹಿಡಿದಿದ್ದರು. ಕೊನೆಗೆ ಇಬ್ಬರ ಮನವೊಲಿಕೆ ಕಷ್ಟವಾಗಿ ಸಿಎಂ ಸ್ಥಾನ ಆಯ್ಕೆ ಹೈಕಮಾಂಡ್​ಗೆ ಬಿಡಲಾಗಿತ್ತು. ಅದಾಗ್ಯೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಷಯ ಇತ್ಯರ್ಥಪಡಿಸಲು ಹರಸಾಹಸ ಪಡಬೇಕಾಗಿತ್ತು.

    ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

    ಕರ್ನಾಟಕದಲ್ಲಿ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ವೀಕ್ಷಕರು ಸಭೆ ನಡೆಸಿದ್ದಲ್ಲದೆ, ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಬಳಿಕ ಶಾಸಕರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ದೆಹಲಿಯಲ್ಲಿ ಖರ್ಗೆ ಮತ್ತೆ ಇಬ್ಬರನ್ನು ಕರೆಸಿಕೊಂಡು ಸಭೆ ನಡೆಸಿದ್ದರೂ ಇಬ್ಬರೂ ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಆದರೆ ಕೊನೆಗೆ ಈ ವಿಚಾರದಲ್ಲಿ ಡಿಕೆಶಿ ಮನವೊಲಿಸಿದ್ದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಸಿಎಂ ಸ್ಥಾನಕ್ಕಾಗಿ ಬಂಡೆದ್ದ ಶಿವಕುಮಾರ್​ ಅವರನ್ನು ಡಿಸಿಎಂ ಸ್ಥಾನ ಒಪ್ಪಿಕೊಳ್ಳುವಂತೆ ಸೋನಿಯಾ ಗಾಂಧಿಯೇ ಪ್ರಮುಖವಾಗಿ ಮನವೊಲಿಸಿದ್ದು ಎಂಬುದು ತಿಳಿದುಬಂದಿದೆ.

    ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ; ಡಿ.ಕೆ.ಶಿವಕುಮಾರ್ ಡಿಸಿಎಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts