ಹಾವೇರಿ: ‘ಕಾಂತಾರ’ ಸಿನಿಮಾ ಬಂದ ಬಳಿಕ ದೈವ-ಭೂತಗಳ ಬಗ್ಗೆ ಕರಾವಳಿಯ ಹೊರತಾದ ಜನರಿಗೂ ವಿಶೇಷ ಪರಿಚಯ ಆಗಿದ್ದಲ್ಲದೆ ಪ್ರಚಾರವೂ ಸಿಕ್ಕಿದೆ. ಈ ನಡುವೆ ಕರಾವಳಿಯ ಕಾರ್ಣಿಕ ದೈವ ಎನಿಸಿಕೊಂಡಿರುವ ಕೊರಗಜ್ಜನ ದೈವಸ್ಥಾನ ದಕ್ಷಿಣಕನ್ನಡದಿಂದ ಹೊರಗೂ ಕೆಲವೆಡೆ ಸ್ಥಾಪನೆಯಾಗಿದ್ದು ಕಂಡುಬಂದಿದೆ.
ಇದೀಗ ಕೊರಗಜ್ಜನ ದೈವಸ್ಥಾನ ಉತ್ತರಕರ್ನಾಟಕ ಪ್ರದೇಶಕ್ಕೂ ವ್ಯಾಪಿಸಿದೆ. ಅದಕ್ಕೆ ಉದಾಹರಣೆ ಎಂಬಂತೆ ಹಾವೇರಿ ಜಿಲ್ಲೆಯಲ್ಲಿ ಕೊರಗಜ್ಜನ ದೈವಸ್ಥಾನವೊಂದು ಸ್ಥಾಪನೆಯಾಗಿದೆ. ಈ ಮೂಲಕ ಎಲ್ಲಮ್ಮ, ದ್ಯಾಮವ್ವ, ಚೌಡಮ್ಮ ಮುಂತಾದ ದೇವರನ್ನು ಆರಾಧಿಸುತ್ತಿರುವ ಉತ್ತರಕರ್ನಾಟಕದ ಜನತೆ ಈಗ ಕರಾವಳಿಯ ದೈವಾರಾಧನೆಯಲ್ಲೂ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಹಾವೇರಿ ತಾಲೂಕಿನ ಕೆರಮತ್ತಿಹಳ್ಳಿಯಲ್ಲಿ ಕೊರಗಜ್ಜನ ದೈವಸ್ಥಾನ ಸ್ಥಾಪನೆಯಾಗಿದೆ. ಅನಾರೋಗ್ಯಗೊಂಡಿದ್ದ ತಂದೆಯ ಚಿಕಿತ್ಸೆ ಸಲುವಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಹೋಗಿದ್ದ ಸ್ಥಳೀಯ ವ್ಯಕ್ತಿ, ಅಲ್ಲಿ ಕೊರಗಜ್ಜನ ಪ್ರಾರ್ಥನೆ ಮಾಡಿಕೊಂಡಿದ್ದರು. ಕೋರಿಕೆಯಂತೆ ತಂದೆ ಗುಣಮುಖರಾಗಿದ್ದು, ಬಳಿಕ ಕನಸಿನಲ್ಲಿ ಬಂದಿದ್ದ ಕೊರಗಜ್ಜ ದೈವಸ್ಥಾನ ಸ್ಥಾಪಿಸುವಂತೆ ಸೂಚಿಸಿದ್ದರಂತೆ. ಅದರಂತೆ ಅವರು ಇಲ್ಲಿ ಕೊರಗಜ್ಜನ ದೈವಸ್ಥಾನ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ
ರಾಣೆಬೆನ್ನೂರಿನ ಮಹಿಳೆಯೊಬ್ಬರು ಮಗಳ ಓದಿನ ಸಲುವಾಗಿ ಪ್ರಾರ್ಥನೆ ಮಾಡಿಕೊಂಡಿದ್ದು, ಪುತ್ರಿ ರ‌್ಯಾಂಕ್ ಬಂದಿದ್ದಾಳೆ ಎಂಬುದಾಗಿ ಇಲ್ಲಿ ಹರಕೆ ತೀರಿಸಲು ಬಂದಿದ್ದಾಗ ಹೇಳಿಕೊಂಡಿದ್ದಾರೆ. ಕರಾವಳಿಯ ರಘು ಅಜ್ಜ ಹಾವೇರಿಯ ಕೊರಗಜ್ಜನ ಸನ್ನಿಧಿಯಲ್ಲಿ ಕೋಲ ಸೇವೆ ಸಮರ್ಪಿಸಿ ಭಕ್ತರಿಗೆ ಆಶೀರ್ವದಿಸಿದ್ದಾರೆ. –ದಿಗ್ವಿಜಯ ನ್ಯೂಸ್
ಅಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಂದು ಬಿ.ಎಲ್.ಸಂತೋಷ್ ಮರುಪ್ರಶ್ನೆ!: ವಿಷಯ ಇದು..
ಹೆಲ್ಮೆಟ್ ಧರಿಸದ ಮಹಿಳಾ ಪಿಎಸ್ಐ; ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು