

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಮಾಡಿದ್ದ ಹಿನ್ನೆಲೆಯಲ್ಲಿ ಪತ್ರಕರ್ತೆಯರಿಬ್ಬರ ಬಂಧನವಾಗಿದೆ. ಸಮೃದ್ಧಿ ಕೆ. ಸಕುನಿಯಾ, ಸ್ವರ್ಣ ಝಾ ಬಂಧಿತ ಪತ್ರಕರ್ತೆಯರು. ತ್ರಿಪುರ ಪೊಲೀಸರು ಭಾನುವಾರವೇ ಇವರನ್ನು ವಶಕ್ಕೆ ಪಡೆದಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರದ ಕಕ್ರಬಾನ್ ಎಂಬಲ್ಲಿಗೆ ಗುರುವಾರ ವರದಿಗೆ ತೆರಳಿದ್ದ ಈ ಪತ್ರಕರ್ತೆಯರು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಇವರ ಬಂಧನಕ್ಕೆ ಕಾರಣವಾಗಿದೆ. ಸದ್ಯ ತ್ರಿಪುರದ ಗೋಮತಿಯಲ್ಲಿನ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ಆರು ತಿಂಗಳಲ್ಲಿ 400 ಜನರಿಂದ ಅತ್ಯಾಚಾರ; ಪೊಲೀಸರೂ ಭಾಗಿ!
ಗೋಮತಿ ಜಿಲ್ಲೆಯ ಮಸೀದಿಯೊಂದಕ್ಕೆ ಬೆಂಕಿ ತಗುಲಿದೆ, ಅಲ್ಲಿದ್ದ ಕುರಾನ್ ಪ್ರತಿಗೆ ಹಾನಿಯಾಗಿದೆ ಎಂದು ಈ ಪತ್ರಕರ್ತೆಯರು ಪೋಸ್ಟ್ ಮಾಡಿದ್ದರು. ಆದರೆ ಇದರಲ್ಲಿ ಸತ್ಯಾಂಶವಿಲ್ಲ ಹಾಗೂ ಇದರಿಂದ ಕೋಮುಸೌಹಾರ್ದಕ್ಕೆ ಹಾನಿಯಾದ್ದರಿಂದ ಬಂಧಿಸಲಾಗಿದೆ ಎಂದು ತ್ರಿಪುರ ಪೊಲೀಸ್ ಅಧಿಕಾರಿ ವಿ.ಎಸ್. ಯಾದವ್ ತಿಳಿಸಿದ್ದಾರೆ.