ಫಾರ್ಮ್​ಹೌಸ್​ನಲ್ಲಿ ಉನ್ಮತ್ತ ಯುವಕ-ಯುವತಿಯರು; ಬರ್ತ್​ಡೇ ನೆಪದಲ್ಲಿ ಮದ್ಯದ ಪಾರ್ಟಿ

Farm House
Published on

ಹೊಸಕೋಟೆ: ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಗುಂಡು-ತುಂಡಿನ-ಮೋಜಿನ ಪಾರ್ಟಿಗಳು ಇದೀಗ ಗ್ರಾಮಾಂತರ ಪ್ರದೇಶಗಳಿಗೂ ಕಾಲಿಟ್ಟಿದ್ದು, ಒಂದೆಡೆ ಉನ್ಮತ್ತ ಯುವಕ-ಯುವತಿಯರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗೇಟ್ ಸಮೀಪದ ಫಾರ್ಮ್​ ಹೌಸ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಡಿವೈಎಸ್​​ಪಿ ಉಮಾಶಂಕರ್ ನೇತೃತ್ವದಲ್ಲಿ ಹೊಸಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.

ನಗರ ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಂದ ಬರ್ತ್​ಡೇ ನೆಪದಲ್ಲಿ ಪಾರ್ಟಿ ನಡೆಯುತ್ತಿದ್ದುದು ಕಂಡುಬಂದಿದ್ದು, ಬಹುತೇಕ ಎಲ್ಲ ಯುವಕ-ಯುವತಿಯರು ಅಮಲಿನಲ್ಲಿದ್ದರು. ಈ ತಂಡದಲ್ಲಿ 18 ಯುವಕರ ಜತೆ 7 ಯುವತಿಯರೂ ಇದ್ದು ಮದ್ಯದ ಪಾರ್ಟಿಯಲ್ಲಿ ತೊಡಗಿದ್ದರು. ಅಮಲಿನಲ್ಲಿದ್ದವರನ್ನು ಹೊಸಕೋಟೆ ಪೋಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net