ಬೆಡ್​ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..

Nidhi
Published on

ಬೆಂಗಳೂರು: ಸೆಲೆಬ್ರಿಟಿಗಳಿಗೆ ಯಾವುದಾದರೂ ಸೇವೆ ಬಯಸಿದರೆ ಬೇಗ ಸಿಗುತ್ತದೆ, ಮಾತ್ರವಲ್ಲ ಉತ್ತಮವಾದದ್ದೇ ಸಿಗುತ್ತದೆ. ಆದರೆ ಇಲ್ಲೊಬ್ಬರು ನಟಿ ತಮ್ಮ ನಿರೀಕ್ಷೆಗೆ ತಕ್ಕ ಸೇವೆ ಸಿಗದೆ ತೀವ್ರ ಬೇಸರಗೊಳ್ಳುವಂತಾಗಿದೆ. ತಮ್ಮ ಈ ಬೇಸರವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಹೇಳಿಕೊಂಡು ವ್ಯಕ್ತಪಡಿಸಿದ್ದಾರೆ.

ಹೀಗೆ ತಮಗಾದ ನೋವನ್ನು ಹೇಳಿಕೊಂಡಿರುವುದು ಬೇರಾರೂ ಅಲ್ಲ, ನಟಿ ನಿಧಿ ಸುಬ್ಬಯ್ಯ. ಅವರು ಇತ್ತೀಚೆಗೆ ಕಂಪನಿಯೊಂದಕ್ಕೆ ಬೆಡ್​ ಕೇಳಿ ಆರ್ಡರ್ ಮಾಡಿದ್ದರು. ಆದರೆ ಆ ಕಂಪನಿಯವರು ಮೊದಲಿಗೆ ಅರ್ಧಮಂಚವನ್ನಷ್ಟೇ ಕಳಿಸಿದ್ದರು. ಈ ಕುರಿತು ಅವರು ಒಂದು ವಾರಕ್ಕೂ ಅಧಿಕ ಕಾಲ ಇ-ಮೇಲ್ ಹಾಗೂ ಫೋನ್​ ಕರೆಗಳನ್ನು ಮಾಡಿ ವಿಚಾರಿಸಿಕೊಂಡ ಬಳಿಕವಷ್ಟೇ ಇನ್ನೊಂದು ಭಾಗವನ್ನು ಕಳಿಸಿದ್ದರಂತೆ.

ಹಾಗಂತ ಅವ್ಯವಸ್ಥೆ ಅಷ್ಟಕ್ಕೇ ಮುಗಿದಿಲ್ಲ. ಮುಂದೇನಾಯಿತು ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಮತ್ತೆಮತ್ತೆ ಕೇಳಿದ ಬಳಿಕ ಮಂಚದ ಉಳಿದ ಭಾಗವನ್ನು ಕಳಿಸಿದ ಅವರು ನಂತರ ಕಾರ್ಪೆಂಟರನ್ನು ಕಳಿಸಿಲ್ಲ. ಬೆಂಗಳೂರು ಮೂಲದ ಕಂಪನಿಯಿಂದ ತುಂಬಾ ಹೆಚ್ಚಿನದ್ದನ್ನೇ ನಿರೀಕ್ಷಿಸಿದ್ದೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಕಂಪನಿಯ ಹೆಸರು ಹೇಳಿ ಥ್ಯಾಂಕ್ಸ್​ ಎಂದು ವ್ಯಂಗ್ಯವಾಗಿ ತಮ್ಮ ನೋವನ್ನು ಅಭಿವ್ಯಕ್ತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net