ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜತೆಯಲ್ಲೇ ಬಾಲಕರಿಬ್ಬರು ನೀರುಪಾಲು

ganpati visarjan-two boys died
Published on

ಆನೇಕಲ್​: ಗಣೇಶ ಮೂರ್ತಿ ವಿಸರ್ಜನೆ ವೇಳೆ ಭಾರೀ ದುರಂತ ಸಂಭವಿಸಿದ್ದು, ಮಕ್ಕಳಿಬ್ಬರು ನೀರುಪಾಲಾಗಿದ್ದಾರೆ.

ಸೂಳಗಿರಿ ವಾಸಿಗಳಾದ ಭೂಪತಿ(12) ಮತ್ತು ಮುರಳಿ(12) ಮೃತ ಬಾಲಕರು. ಗಣೇಶ ಚತುರ್ಥಿ ಪ್ರಯುಕ್ತ ಮಕ್ಕಳು ಮನೆಯಲ್ಲಿಯೇ ಗಣಪನನ್ನು ಪ್ರತಿಷ್ಠಾಪಿಸಿದ್ದರು. 3 ದಿನದ ಬಳಿಕ ಸ್ನೇಹಿತರೊಂದಿಗೆ ತಮಿಳುನಾಡಿನ ಸೂಳಗಿರಿ ಸಮೀಪದ ಅನಾಸಂದ್ರಂ ಕೆರೆಯಲ್ಲಿ ಗಣೇಶ ವಿಸರ್ಜನೆ ಹೋಗಿದ್ದರು.

ಕೆರೆಯ ಆಳ ಅರಿಯದೇ ಗಣೇಶ ವಿಸರ್ಜನೆಗೆ ಭೂಪತಿ ಮತ್ತು ಮುರಳಿ ಇಳಿದಿದ್ದರು. ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜೊತೆ ಅವರಿಬ್ಬರೂ ನೀರುಪಾಲಾಗಿದ್ದಾರೆ.

ಸ್ಥಳೀಯರ ನೆರವಿನಿಂದ ಮೃತ ದೇಹಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಬ್ಬದ ಸಡಗರದಲ್ಲಿದ್ದ ಊರಿನಲ್ಲಿ ಶೋಕದ ಛಾಯೆ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net