ಕಿರುಕುಳಕ್ಕೆ ಯುವ ವಕೀಲ ಬಲಿ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

suicide
Published on

ಬಳ್ಳಾರಿ: ಯುವ ವಕೀಲರೊಬ್ಬರು ಸೆಲ್ಫಿ ವಿಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದಾರೆ. ಬ್ಯಾಂಕ್ ಒಂದರಲ್ಲಿ ಲೀಗಲ್ ಅಡ್ವೈಸರ್ ಆಗಿದ್ದ ವಕೀಲ ವಿಷ ಸೇವಿಸುವ ಲೈವ್​ ದೃಶ್ಯ ಅವರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಮೃತಪಟ್ಟ ಸ್ಥಳದಲ್ಲಿ ಡೆಟ್​ನೋಟ್ ಕೂಡ ಸಿಕ್ಕಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ವಕೀಲ ಮಹೇಶ್ (28) ಆತ್ಮಹತ್ಯೆ ಮಾಡಿಕೊಂಡವರು. ಹೊಸಪೇಟೆಯ ಬಳ್ಳಾರಿ ಸರ್ಕಲ್​ನಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಲೀಗಲ್ ಅಡ್ವೈಸರ್ ಆಗಿದ್ದರು. ಅವರ ಸಾವಿಗೆ ಕಾರಣ ಏನೆಂದು ಸ್ಥಳದಲ್ಲಿ ಸಿಕ್ಕ ಡೆತ್​ನೋಟ್​ನಲ್ಲಿ ವಿವರಿಸಲಾಗಿದೆ.

ನನ್ನ ಸಾವಿಗೆ ಬ್ಯಾಂಕ್​ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ವಕೀಲ ಮಹೇಶ್​ ಡೆತ್​ನೋಟ್​ ಬರೆದಿಟ್ಟು ವಿಷ ಕುಡಿದು ಸತ್ತಿದ್ದಾರೆ. ಈಕ್ವಿಟಾಸ್ ಬ್ಯಾಂಕ್​ನ ಡಿಡಿಎಂ ರಾಘವೇಂದ್ರ, ಜನರಲ್ ಮ್ಯಾನೇಜರ್ ರಮೇಶ್, ಬಸವರಾಜ್​, ಬ್ರಾಂಚ್ ಮ್ಯಾನೇಜರ್ ಏಕಾಂತಪ್ಪ ಅವರೇ ನನ್ನ ಸಾವಿಗೆ ಕಾರಣ. ದಾಖಲೆಗಳು ಸರಿಯಾಗಿ ಇಲ್ಲದಿದ್ದರೂ ಲೋನ್ ಕೊಡಲು ಅಧಿಕಾರಿಗಳು‌‌ ಒತ್ತಾಯ ಮಾಡುತ್ತಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net