ರಾಜ್ಯದಲ್ಲಿ ಎರಡು ಭೀಕರ ಅಪಘಾತ; ಒಟ್ಟು ಆರು ಮಂದಿ ಸ್ಥಳದಲ್ಲೇ ಸಾವು; ಹಲವರಿಗೆ ಗಾಯ..

Accident
ಸ್ವಿಫ್ಟ್​-ಇನ್ನೋವಾ ಆ್ಯಕ್ಸಿಡೆಂಟ್
Published on

ಗದಗ/ಮಂಡ್ಯ: ರಾಜ್ಯದಲ್ಲಿ ಇಂದು ಭೀಕರವಾಗಿ ಸಂಭವಿಸಿದ ಇನ್ನೆರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಪ್ರಕರಣಗಳಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಕೆಲವರ ಪರಿಸ್ಥಿತಿ ಗಂಭೀರವಾಗಿದೆ.

ಈ ಅಪಘಾತಗಳಲ್ಲಿ ಒಂದು ಗದಗ ಹಾಗೂ ಇನ್ನೊಂದು ಮಂಡ್ಯದಲ್ಲಿ ಸಂಭವಿಸಿದೆ. ಗದಗ ತಾಲೂಕಿನ ಕೋಟುಮಚಗಿ ಗ್ರಾಮ‌ದಲ್ಲಿ ಬೈಕ್​ ಹಾಗೂ ಮಿನಿ ಬಸ್​ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಗದಗ-ರೋಣ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮಿನಿ ಬಸ್ ರೋಣದಿಂದ ಗದಗ ಕಡೆಗೆ ಹಾಗೂ ಬೈಕ್​ ಗದಗದಿಂದ ನರೇಗಲ್ ಕಡೆಗೆ ಸಾಗುತ್ತಿತ್ತು. ಬೈಕ್​ ಸವಾರರಾದ ಸಂಗಮೇಶ್ (27), ದತ್ತಪ್ಪ (30) ಸಾವಿಗೀಡಾದವರು. ಮೃತರಿಬ್ಬರೂ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ನಿವಾಸಿಗಳು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಭೀಕರ ಅಪಘಾತ ಮಂಡ್ಯ ಜಿಲ್ಲೆಯ‌ ನಾಗಮಂಗಲ ತಾಲೂಕಿನ ಎ.ನಾಗತೀಹಳ್ಳಿಯಲ್ಲಿ ಸಂಭವಿಸಿದೆ. ಎ.ನಾಗತಿಹಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸ್ವಿಫ್ಟ್​ ಕಾರು ಹಾಗೂ ಇನ್ನೋವಾ ಮಧ್ಯೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದರು. ಸ್ಥಳಕ್ಕೆ ಬಿಂಡಿಗನವಿಲೆ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಕುರಿತ ಹೆಚ್ಚಿನ ಹಾಗೂ ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net