More

    ಮಾರಣಾಂತಿಕ ಮೇಲ್ಸೇತುವೆ: ಮುಗಿಯದ ಫ್ಲೈಓವರ್​ನಲ್ಲಿ ಮುಗಿದೇ ಹೋಯ್ತು ಬದುಕು; ದಂಪತಿ ಸಾವು, ಪುತ್ರಿಯ ಪರಿಸ್ಥಿತಿ ಗಂಭೀರ

    ರಾಯ್ಪುರ: ಸದ್ಯ ಇದನ್ನು ಮಾರಣಾಂತಿಕ ಮೇಲ್ಸೇತುವೆ ಎಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಮುಂದೇನು ಎಂಬ ಅರಿವಿರದೆ ಈ ಫ್ಲೈಓವರ್​ನಲ್ಲಿ ಸಾಗಿದರೆ ಸಾವೇ ಗತಿ. ಅಷ್ಟಕ್ಕೂ ಮುಗಿಯದ ಈ ಫ್ಲೈಓವರ್​ ಇಬ್ಬರ ಬದುಕನ್ನೇ ಮುಗಿಸಿ ಹಾಕಿದೆ. ಮಾತ್ರವಲ್ಲ, ಬಾಲಕಿಯೊಬ್ಬಳ ಪರಿಸ್ಥಿತಿ ಗಂಭೀರವಾಗಿದ್ದು, ಒಂದು ಕಾರು, ಒಂದು ಬೈಕ್ ಜಖಂಗೊಂಡಿದೆ.

    ಛತ್ತೀಸ್​ಗಢದ ರಾಯ್ಪುರದಿಂದ 17 ಕಿ.ಮೀ. ದೂರದಲ್ಲಿ ಕುಮ್ಹರಿ ಎಂಬಲ್ಲಿ ಈ ಫ್ಲೈಓವರ್ ನಿರ್ಮಾಣಗೊಳ್ಳುತ್ತಿದ್ದು, ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಅದಾಗ್ಯೂ ಇಲ್ಲಿ ಆ ಬಗ್ಗೆ ಯಾವುದೇ ಎಚ್ಚರಿಕೆ ಫಲಕ ಇಲ್ಲವೇ ಬ್ಯಾರಿಕೇಡ್ ಹಾಕಿಲ್ಲ. ಹೀಗಾಗಿ ಇದರ ಅರಿವಿರದೆ ಶುಕ್ರವಾರ ರಾತ್ರಿ ಈ ಫ್ಲೈಓವರ್​ ಮೇಲೆ ಬೈಕ್​ನಲ್ಲಿ 12 ವರ್ಷದ ಪುತ್ರಿಯೊಂದಿಗೆ ತೆರಳಿದ ದಂಪತಿ ಮುಂದೆ ಫ್ಲೈಓವರ್​ನ ಅಪೂರ್ಣ ತುದಿಯಿಂದ 30 ಅಡಿ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ. ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯನ್ನು ರಾಯ್ಪುರದ ಏಮ್ಸ್​ಗೆ ದಾಖಲಿಸಲಾಗಿದೆ.

    ಸಾವಿಗೀಡಾದ ದಂಪತಿಯನ್ನು ಆಜುರಾಮ್ ದೇವಾಂಗನ್ (45) ಮತ್ತು ನಿರ್ಮಲಾ ಎಂದು ಗುರುತಿಸಲಾಗಿದೆ. ಇವರು ಭಿಲಾಯಿ ಎಂಬಲ್ಲಿ ನಡೆದ ಮದುವೆಗೆ ಹಾಜರಾಗಿ ಮರಳಿ ರಾಯ್ಪುರಕ್ಕೆ ತೆರಳುವಾಗ ಈ ಘಟನೆ ನಡೆದಿದೆ. ಇರುಳಿನ ಜತೆ ಮಂಜು ಕವಿದ ವಾತಾವರಣ ಇದ್ದಿದ್ದರಿಂದ ಫ್ಲೈಓವರ್ ಅಪೂರ್ಣವಾಗಿ ಇದ್ದಿದ್ದು ಇವರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.

    ಅದಾಗಿ ಎರಡು ಗಂಟೆಗಳ ಬಳಿಕ ಕಾರೊಂದು ಇದೇ ಫ್ಲೈಓವರ್​ ಮೇಲೆ ಸಾಗಿ, ಅಪೂರ್ಣ ತುದಿಯಿಂದ ಕೆಳಕ್ಕೆ ಬಿದ್ದಿದು ಜಖಂಗೊಂಡಿದ್ದರೂ ಏರ್​ಬ್ಯಾಗ್​ನಿಂದಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಷ್ಟಾದರೂ ಸೂಕ್ತ ಫಲಕ ಅಳವಡಿಸಲಿಲ್ಲ ಎನ್ನಲಾಗಿದೆ. ಪ್ರಕರಣದ ಕುರಿತಂತೆ ಸಂಬಂಧಿತ ನಿರ್ಮಾಣ ಸಂಸ್ಥೆ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

    ರೈಲ್ವೇ ಪ್ಲ್ಯಾಟ್​ಫಾರ್ಮ್​ನಲ್ಲೇ ಬಿದ್ದಿತ್ತು 100 ಗ್ರಾಂ ಚಿನ್ನಾಭರಣವಿದ್ದ ಬಾಕ್ಸ್; ಆಮೇಲಾಗಿದ್ದೇನು?

    ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts