ಧರ್ಮಬೋಧಕನಿಗೆ 1,075 ವರ್ಷ ಜೈಲು ಶಿಕ್ಷೆ: ಸೆಕ್ಸ್​ ಆರಾಧಿಸೋ ಈತನ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

Adnan otkar
Published on

ಅಂಕಾರ (ಟರ್ಕಿ): ಟರ್ಕಿಯ​ ಲೈಂಗಿಕ ಆರಾಧನಾ ನಾಯಕ (ಸೆಕ್ಸ್​ ಕಲ್ಟ್​ ಲೀಡರ್​) ಮತ್ತು ಗ್ಲಾಮರಸ್​ ಮಹಿಳೆಯರ ನಡುವೆಯೇ ಪ್ರತಿನಿತ್ಯ ಟಿವಿ ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಧರ್ಮೋಪದೇಶಗಳನ್ನು ಮಾಡುತ್ತಿದ್ದ ಧರ್ಮಬೋಧಕನಿಗೆ ವಿವಿಧ ಅಪರಾಧ ಪ್ರಕರಣಗಳಡಿಯಲ್ಲಿ 1000 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.

ಆರೋಪಿಯ ಹೆಸರು ಅದ್ನಾನ್​ ಒಕ್ತಾರ್​. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕ್ರಿಮಿನಲ್​ ಗ್ಯಾಂಗ್​ ಲೀಡರ್​, ರೇಪ್​, ಬೆದರಿಕೆ, ವಂಚನೆ, ರಾಜಕೀಯ, ಮಿಲಿಟರಿ ಬೇಹುಗಾರಿಕೆ ಮತ್ತು ಹಿಂಸೆಗೆ ಕಾರಣ ಸೇರಿದಂತೆ 10 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1,075 ವರ್ಷ ಶಿಕ್ಷೆ ವಿಧಿಸಲಾಗಿದ್ದು, ತನ್ನ ಮೇಲಿನ ಆರೋಪಗಳನ್ನು 64 ವರ್ಷದ ಒಕ್ತಾರ್​ ಅಲ್ಲಗೆಳೆದಿದ್ದಾನೆ.

ಸಂಪ್ರದಾಯವಾದಿ ಇಸ್ಲಾಮಿಕ್ ಬೋಧಕನಾಗಿರುವ ಒಕ್ತಾರ್​, ತನ್ನದೇ ಖಾಸಗಿ ಟಿವಿ ವಾಹಿನಿಯಲ್ಲಿ ಗ್ಲಾಮರಸ್​ ಮಹಿಳೆಯರ ನಡುವೆ ದೇವತಾಶಾಸ್ತ್ರದ ಚರ್ಚೆಗಳನ್ನು ನಡೆಸುವುದು ಹಾಗೂ ಧರ್ಮಬೋದನೆ ಮಾಡುತ್ತಿದ್ದ. ಇದೀಗ ಕೋರ್ಟ್​ ವಿಚಾರಣೆಯಲ್ಲಿ ರೇಪ್​ ಆರೋಪಗಳ ಸ್ಪಷ್ಟ ಮಾಹಿತಿ ಸಿಕ್ಕಿದೆ. ಅಲ್ಲದೆ, ಸುಮಾರು 1000 ಗರ್ಲ್​ಫ್ರೆಂಡ್​ಗಳನ್ನು ಹೊಂದಿದ್ದಾಗಿ ಸ್ವತಃ ಆತನೇ ಡಿಸೆಂಬರ್​ನಲ್ಲಿ ಜಡ್ಜ್​ ಮುಂದೆ ಒಪ್ಪಿಕೊಂಡಿದ್ದ.

ಮಹಿಳೆಯರಿಗೆ ನನ್ನ ಹೃದಯದಲ್ಲಿ ಪ್ರೀತಿಯ ಉಕ್ಕಿ ಹರಿಯುತ್ತಿದೆ. ಪ್ರೀತಿ ಎಂಬುದ ಮನಷ್ಯನ ಗುಣವಾಗಿದೆ. ಇದು ಮುಸ್ಲಿಂರ ಗುಣವಾಗಿದೆ ಎಂದು ಅಕ್ಟೋಬರ್​ನಲ್ಲಿ ನಡೆದಿದ್ದ ಇನ್ನೊಂದು ವಿಚಾರಣೆ ವೇಳೆ ಹೇಳಿಕೊಂಡಿದ್ದ. ಅಲ್ಲದೆ, ಮತ್ತೊಂದು ವಿಚಾರಣೆ ವೇಳೆ ನಾನು ಅಸಾಧಾರಣ ಶಕ್ತಿಶಾಲಿ, ವೀರ್ಯವತ್ತಾದ ಪುರುಷನೆಂದು ಹೇಳಿದ್ದ.

ವಿಚಾರಣೆ ವೇಳೆ ಓರ್ವ ಮಹಿಳೆ ಮುಂದೆ ಬಂದು ಅನೇಕ ಬಾರಿ ತನ್ನ ಮೇಲೆ ಹಾಗೂ ಇತರೆ ಮಹಿಳೆಯರ ಮೇಲೆ ಒಕ್ತಾರ್​ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಹಿರಂಗಪಡಿಸಿದ್ದಳು. ಇನ್ನು ಕೆಲವರಿಗೆ ಬಲವಂತವಾಗಿ ಗರ್ಭನಿರೋಧಕ ಮಾತ್ರೆಗಳನ್ನು ನೀಡಿದ್ದಾನೆಂದು ನ್ಯಾಯಾಲಯದಲ್ಲಿ ಮಹಿಳೆ ತಿಳಿಸಿದ್ದಾಳೆ.

ಇನ್ನು ಒಕ್ತಾರ್​ ಮನೆಯಲ್ಲಿ 69,000 ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿದ್ದು, ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಒಕ್ತಾರ್​​, ಚರ್ಮದ ಕಾಯಿಲೆಗಳು ಮತ್ತು ಮುಟ್ಟಿನ ಅವ್ಯವಹಾರಕ್ಕಾಗಿ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು ಎಂದಿದ್ದಾನೆ. ತನ್ನ ವಿರುದ್ಧ ಮಾಡಿರುವ ಆರೋಪ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಅಂದಹಾಗೆ ಒಕ್ತಾರ್​ 1990ರಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಗಮನಸೆಳೆದಿದ್ದ. ಅನೇಕ ಲೈಂಗಿಕ ಹಗರಣಗಳಲ್ಲಿ ಸಿಕ್ಕಿಬಿದ್ದ ಒಂದು ಪಂಥದ ನಾಯಕರಾಗಿದ್ದ. ಈತನ ಎ9 ಆನ್​ಲೈನ್​ ಟಿವಿ ಚಾನೆಲ್​ 2011ರಲ್ಲಿ ಆರಂಭವಾಯಿತು. ಇದರ ಬೆನ್ನಲ್ಲೇ ಟರ್ಕಿಯ ಧಾರ್ಮಿಕ ಮುಖಂಡರಿಂದ ಸಾಕಷ್ಟು ಖಂಡನೆಗಳು ಸಹ ವ್ಯಕ್ತವಾಗಿತ್ತು.

ಒಕ್ತಾರ್​ನನ್ನು 2018ರಲ್ಲಿ ಆತನ ಅನುನಾಯಿಗಳ ಸಮೇತ ಪೊಲೀಸ್​ ದಾಳಿಯ ವೇಳೆ ಬಂಧಿಸಲಾಯಿತು. ಆತನ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗಿತ್ತು. ಈತನ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಟರ್ಕಿಯ ಮಾಧ್ಯಮ ನಿಯಂತ್ರಣ ಸಂಸ್ಥೆ ಆತನ ಮಹಿಳೆಯರ ನಡುವಿನ ಕಾರ್ಯಕ್ರಮವನ್ನು ಬ್ಯಾನ್​ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net