ಮಧ್ಯರಾತ್ರಿ ಮಹಿಳೆಯ ಬರ್ಬರ ಹತ್ಯೆ: ಫೋನ್​ ಕರೆ ಸ್ವೀಕರಿಸಿದ ಮೃತಳ ಭಾವನಿಗೆ ಕಾದಿತ್ತು ಶಾಕ್​!

Woman
Published on

ಅನಂತಪುರ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದ್ದು, ಮಹಿಳೆಯ ಕೊಲೆಯಿಂದಾಗಿ ಮಕ್ಕಳಿಬ್ಬರು ಅನಾಥವಾಗಿದ್ದಾರೆ.

ಘಟನೆ ಬಗ್ಗೆ ವಿವರಣೆ ನೀಡಿರುವ ಪೊಲೀಸ್​ ಅಧಿಕಾರಿ ಪ್ರತಾಪ್​ ರೆಡ್ಡಿ, ಶನಿವಾರ ಘಟನೆ ನಡೆದಿದ್ದು, 32 ವರ್ಷದ ಯಶೋಧ, ರಾಣಿ ನಗರದ ಕಬ್ಬಿಣ ಕೆಲಸಗಾರ ಶಂಕರ್ ಎಂಬುವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ಮದುವೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳಿದ್ದರು. ನಾಲ್ಕು ವರ್ಷಗಳ ಹಿಂದೆ ಇಬ್ಬರ ನಡುವಿನ ವಿರಸದಿಂದಾಗಿ ದಂಪತಿ ಬೇರೆಯಾಗಿದ್ದಾರೆ. ​

ಇದರ ನಡುವೆ ಯಶೋಧಾಗೆ ಮಸ್ಜಿದ್​ ಕೊಟ್ಟಲಾದ ಬುಕ್ಕರಾಯಸಮುದ್ರಂ ನಿವಾಸಿ ಆಟೋ ಚಾಲಕ ಮಲ್ಲಿಕಾರ್ಜುನ್​ ಪರಿಚಯವಾಗಿತ್ತು. ಮಲ್ಲಿಕಾರ್ಜುನನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಅಶೋಕನಗರದಲ್ಲಿ ಎರಡು ವರ್ಷಗಳಿಂದ ವಾಸವಿದ್ದಾನೆ. ಯಶೋಧಾ ಮತ್ತು ಮಲ್ಲಿಕಾರ್ಜುನ್​ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ಇದರ ನಡುವೆ ಯಶೋಧಾಗೆ ಬೇರೊಬ್ಬನ ಜತೆ ಸಂಬಂಧ ಹೊಂದಿರುವ ಅನುಮಾನ ಮಲ್ಲಿಕಾರ್ಜುನ್​ಗೆ ಕಾಡತೊಡಗಿತ್ತು.

ಇದೇ ವಿಚಾರವಾಗಿ ಇಬ್ಬರ ನಡುವೆ ಶನಿವಾರ ಮಧ್ಯರಾತ್ರಿ ಜಗಳ ಶುರುವಾಗಿತ್ತು. ಕೋಪದಿಂದ ಮಲ್ಲಿಕಾರ್ಜುನ್​ ಕಬ್ಬಿಣದ ಸಲಾಕೆಯಿಂದ ಯೋಶಧಾಳ ತಲೆಗೆ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಬರಿಗೊಂಡ ಆತ ಮನೆಯ ಬಾಗಿಲು ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಇದಾದ ಬಳಿಕ ಯಶೋಧಾಳ ಭಾವ (ಅಕ್ಕ ವಿಜಯಲಕ್ಷ್ಮೀಯ ಪತಿ) ಸಂಜೀವ್​ ಕುಮಾರ್​ಗೆ​ ಭಾನುವಾರ ಕರೆ ಮಾಡಿದ ಮಲ್ಲಿಕಾರ್ಜುನ್, "ಹೋಗಿ ನೋಡಿ ನಿಮ್ಮ ಮರವನ್ನು ಕೊಂದರು" ಎಂದು ಹೇಳಿದ್ದಾನೆ. ಇದರ ಬೆನ್ನಲ್ಲೆ ಸಂಜೀವ್​ ಕುಮಾರ್​ ದಂಪತಿ ಅಶೋಕನಗರದ ಮನೆಗೆ ತೆರಳಿ ನೋಡಿದಾಗ ಬಾಗಿಲು ಮುಚ್ಚಿತ್ತು. ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದನ್ನು ನೋಡಿದ ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ತಂಗಿ ಸತ್ತು ಬಿದ್ದಿರುವುದು ಸಹೋದರಿಗೆ ವಿಜಯಲಕ್ಷ್ಮಿಗೆ ಗೊತ್ತಾಗುತ್ತದೆ. ಮಕ್ಕಳಿಬ್ಬರು ಅನಾಥವಾಗಿದ್ದು, ಅವರು ಜವಾಬ್ದಾರಿ ಇದೀಗ ಅಕ್ಕ-ಭಾವನ ಮೇಲೆ ಬಿದ್ದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net