More

    ಬೆಳ್ಳಂಬೆಳಗ್ಗೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದು ನೋಡಿದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!​

    ಹೈದರಾಬಾದ್​: ಭಾನುವಾರ ಮುಂಜಾನೆಯೇ ಭಯ ಹುಟ್ಟಿಸುವ ಘಟನೆ ನಡೆದಿದ್ದು, ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದು ನೋಡಿದ ಹೈದರಾಬಾದ್​, ರಾಜೇಂದ್ರನಗರ ಪೊಲೀಸರಿಗೆ ಶಾಕ್​ ಒಂದು ಎದುರಾಗಿತ್ತು.

    ಪಿವಿಎನ್​ಆರ್​ ಎಕ್ಸ್​ಪ್ರೆಸ್​ವೇನ ಪಿಲ್ಲರ್​ ನಂಬರ್​ 223ರ ಸಮೀಪದ ರಸ್ತೆ ಬದಿಯಲ್ಲಿ ಸೂಟ್​ಕೇಸ್​ ಪತ್ತೆಯಾಗಿದ್ದು, ತೆರೆದು ನೋಡಿದ ಪೊಲೀಸರು ಮೃತದೇಹವನ್ನು ಕಂಡು ಶಾಕ್​ ಆಗಿದ್ದಾರೆ. ಸತ್ತವನನ್ನು 25 ವರ್ಷದ ಆಟೋ ಚಾಲಕ ರಿಯಾಜ್​ ಎಂದು ಗುರುತಿಸಲಾಗಿದ್ದು, ಈತ ಶನಿವಾರದಿಂದ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿರಿ: ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

    ಪ್ರಕರಣ ಕುರಿತು ಎಸಿಪಿ ಸಂಜಯ್​ ಕುಮಾರ್​ ಮಾತನಾಡಿ, ರಾಜೇಂದ್ರನಗರ ಪೊಲೀಸ್​ ಗಸ್ತು ಪಡೆ ಭಾನುವಾರ ಬೆಳ್ಳಂಬೆಳಗ್ಗೆ ಸುಮಾರು 3.30ರ ಸುಮಾರಿಗೆ ಅರಾಮ್​ಘರ್​-ಮೆಹದಿಪಟ್ನಂದ ಪಿಲ್ಲರ್​ ನಂ. 223ರಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ನೋಡಿದರು. ತೆರೆದು ನೋಡಿದಾಗ ಮೃತದೇಹವೊಂದು ಪತ್ತೆಯಾಯಿತು. ದೇಹದ ಮೇಲೆ ಕೆಲವೊಂದು ಗಾಯದ ಗುರುತುಗಳಿದ್ದವು. ಮೃತನನ್ನು ರಿಯಾಜ್​ ಎಂದು ಗುರುತಿಸಲಾಗಿದೆ. ಆತ ಹೈದರಾಬಾದ್​ ಓಲ್ಡ್​ ಸಿಟಿಯ ಚಂದ್ರಯಾಂಗುಟ್ಟದ ನಿವಾಸಿ ಎಂದು ಮಾಹಿತಿ ನೀಡಿದ್ದಾರೆ.

    ರಿಯಾಜ್​ ಪತ್ನಿ ಶನಿವಾರವಷ್ಟೇ ನಾಪತ್ತೆ ಪ್ರಕರಣ ದಾಖಲಿಸಿದ್ದಳು. ತನಿಖೆ ನಡೆಯುತ್ತಿರುವಾಗಲೇ ಮೃತದೇಹ ಪತ್ತೆಯಾಗಿದೆ. ಇತರೆ ಆಟೋ ಚಾಲಕನ ದ್ವೇಷಕ್ಕೆ ಕೊಲೆಯಾಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಎಸಿಪಿ ಸಂಜಯ್​ ಕುಮಾರ್​ ಹೇಳಿದರು.

    ಇದನ್ನೂ ಓದಿರಿ: ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಇದೇ ವೇಳೆ ರಿಯಾಜ್​ಗಾಗಿ ಹಗಲಿರುಳು ಹುಡುಕಾಡುತ್ತಿದ್ದ ಕುಟುಂಬ ಪೊಲೀಸರಿಗೆ ಮೃತದೇಹ ಸಿಕ್ಕಿರುವ ಮಾಹಿತಿ ತಿಳಿದು ಠಾಣೆಗೆ ಆಗಮಿಸುತ್ತಾರೆ. ರಿಯಾಜ್​ ಶವವೆಂದು ಖಚಿವಾಗುತ್ತಿದ್ದಂತೆ ಕುಟುಂಬದ ಕಣ್ಣೀರ ಕೋಡಿ ಒಡೆಯುತ್ತದೆ. ಕುಟುಂಬದ ಸಮ್ಮುಖದಲ್ಲಿ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಾರೆ. ಈ ವೇಳೆ ಸೈಯದ್​ ಮತ್ತು ಫೆರೋಜ್​ ಎಂಬಿಬ್ಬರನ್ನು ಕುಟುಂಬ ಗುರುತು ಹಿಡಿಯುತ್ತದೆ.

    ಇದೀಗ ಶಂಕಿತರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ರಿಯಾಜ್​ನನ್ನು ಕೊಲೆ ಮಾಡಿದ ಸೂಟ್​ಕೇಸ್​ನಲ್ಲಿ ಮೃತದೇಹ ಇಟ್ಟು ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ. ಬಂಡೆಗಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಕೊಲೆಯಾದ ಸಮಯದಲ್ಲಿ ಮೂವರು ಸಹ ಪಾನಮತ್ತ ಸ್ಥಿತಿಯಲ್ಲಿದ್ದರು ಎಂಬ ಮಾಹಿತಿ ಇದ್ದು, ಮೂವರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಹಿಂದೆ ಹಣಕಾಸಿನ ವ್ಯವಹಾರವೇ ಕಾರಣವೆಂದು ತಿಳಿದುಬಂದಿದೆ.

    ಇದನ್ನೂ ಓದಿರಿ: ಭಯದಿಂದಲೇ ಎಸ್​ಬಿಐ ಉದ್ಯೋಗಿ ಆತ್ಮಹತ್ಯೆಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ!

    ರಿಯಾಜ್​ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)

    ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

    ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts