More

    ಹೈದರಾಬಾದ್​ನಿಂದ ಅಯೋಧ್ಯೆಗೆ ಹೊರಟ ಬೃಹತ್​ ಲಾಡು: ಒಟ್ಟು ತೂಕ ಕೇಳಿದ್ರೆ ಬೆರಗಾಗ್ತೀರಾ!

    ಹೈದರಾಬಾದ್​: ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಕಾತರದಿಂದ ಎದುರು ನೋಡುತ್ತಿದೆ. ಜನವರಿ 22ರಂದು ಬಾಲರಾಮ ಪ್ರಾಣ ಪ್ರತಿಷ್ಠಾ ನೆರವೇರಲಿದ್ದು, ಅಯೋಧ್ಯೆಯು ಇಂದ್ರ ಲೋಕದಂತೆ ಸಜ್ಜುಗೊಳ್ಳುತ್ತಿದೆ. ಈಗಾಗಲೇ ಸಾಕಷ್ಟು ಗಣ್ಯರಿಗೆ ಆಹ್ವಾನವನ್ನು ನೀಡಲಾಗಿದೆ. ಕೆಲವರು ಸ್ವಯಂ ಪ್ರೇರಿತರಾಗಿ ಅಯೋಧ್ಯೆ ಕಡೆ ಹೊರಟಿದ್ದಾರೆ. ಇದರ ನಡುವೆ ಕೆಲವರು ವಿಶೇಷವಾಗಿ ತಮ್ಮದೇ ರೀತಿಯಲ್ಲಿ ಶ್ರೀರಾಮನಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚೆಗೆ ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬರು ಚಿನ್ನ ಲೇಪಿತ ಪಾದುಕೆಗಳನ್ನು ಪಾದಯಾತ್ರೆ ಮೂಲಕ ಅಯೋಧ್ಯೆಗೆ ಕೊಂಡೊಯ್ದರು. ಇದೀಗ ಮತ್ತೊಬ್ಬ ವ್ಯಕ್ತಿಯು ಸಹ ತಮ್ಮ ವಿಶೇಷ ಭಕ್ತಿಯಿಂದ ಎಲ್ಲರ ಮನ ಗೆದ್ದಿದ್ದಾರೆ. ಹೌದು, ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬ ಬರೋಬ್ಬರಿ 1265 ಕೆಜಿ ತೂಕದ ಲಾಡು ತಯಾರು ಮಾಡುವ ಮೂಲಕ ರಾಮನ ಮೇಲಿನ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇಂದು ಹೈದರಾಬಾದ್‌ನಿಂದ ಅಯೋಧ್ಯೆಗೆ ಈ ಲಾಡುವನ್ನು ರೆಫ್ರಿಜರೇಟೆಡ್ ಗಾಜಿನ ಪೆಟ್ಟಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಬೃಹತ್ ಲಡ್ಡುವನ್ನು ಕೇಸರಿ ಮತ್ತು ಹಸಿರು ಖಾದ್ಯ ವಸ್ತುಗಳಿಂದ ಅಲಂಕರಿಸಲಾಗಿದೆ.

    ಈ ಬೃಹತ್ ಲಾಡು ತಯಾರಿಕೆಯ ಕಲ್ಪನೆ ನಾಗಭೂಷಣ ರೆಡ್ಡಿ ಅವರದ್ದು. ಈ ಲಾಡು ತಯಾರಿಸಲು ಸುಮಾರು 30 ಜನರು 24 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿದರು. ಈ ಲಾಡುವನ್ನು ಹೈದ್ರಾಬಾದ್‌ನಿಂದ ಅಯೋಧ್ಯೆಗೆ ರೆಫ್ರಿಜರೇಟೆಡ್ ಬಾಕ್ಸ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ನಾವು ಜನವರಿ 17 ರಂದು ಹೈದರಾಬಾದ್‌ನಿಂದ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದೇವೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಸಿವಿಲ್ ಇಂಜಿನಿಯರ್ ಪ್ರಫುಲ್ಲ ಮಾಟೆಗಾಂವ್ಕರ್ ಅವರು ತಮ್ಮ ಮನೆಯಲ್ಲಿ ಅಯೋಧ್ಯೆಯ ರಾಮಮಂದಿರದ 11 ಅಡಿ ಪ್ರತಿಕೃತಿಯನ್ನು ಮಾಡಿದರು. ಇನ್ನೊಂದೆಡೆ ಕಾಶ್ಮೀರದ ಉರಿಯ ಕಾಲೇಜು ವಿದ್ಯಾರ್ಥಿನಿ ಬಟೂಲ್ ಜೆಹ್ರಾ ಅವರು ಪಹಾರಿ ಭಾಷೆಯಲ್ಲಿ ರಾಮ್ ಭಜನ್ ಹಾಡಿ, ಗಮನ ಸೆಳೆದಿದ್ದಾರೆ. ಹೀಗೆ ಸಾಕಷ್ಟು ಮಂದಿ ತಮ್ಮದೇ ರೀತಿಯಲ್ಲಿ ಭಕ್ತಿ ಪರಕಾಷ್ಠೆಯನ್ನು ಮೆರೆಯುತ್ತಿದ್ದಾರೆ. (ಏಜೆನ್ಸೀಸ್​)

    Gold, Silver Price; ಚಿನ್ನ ಖರೀದಿಗೆ ಇದೇ ಒಳ್ಳೆಯ ಸಮಯ; ದಿನೇ ದಿನೇ ಕಡಿಮೆಯಾಗುತ್ತಲೇ ಇದೆ ಬಂಗಾರದ ಬೆಲೆ

    ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್‍ಜೆಟ್ ವಿಮಾನದ ಶೌಚಾಲಯದಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕ, ಆಮೇಲೇನಾಯ್ತು?

    ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಸ್ಕೀಮ್​ ರದ್ದಾಗುತ್ತಾ? ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts