More

    ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್‍ಜೆಟ್ ವಿಮಾನದ ಶೌಚಾಲಯದಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕ, ಆಮೇಲೇನಾಯ್ತು?

    ಬೆಂಗಳೂರು: ಅಲ್ಲಲ್ಲಿ ವಿಮಾನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದು ಅಪರೂಪವಾದರೂ ಇದು ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸುತ್ತದೆ. ಈಗೇನಾಗಿರಬಹುದು ಎಂಬುದು ನಿಮಗೆ ಈಗಾಗಲೇ ಶೀರ್ಷಿಕೆ ನೋಡಿಯೇ ತಿಳಿದಿರುತ್ತದೆ. ಹೌದು, ಮುಂಬೈ-ಬೆಂಗಳೂರು ಸೈಸ್‌ಜೆಟ್ ವಿಮಾನದ ಡೋರ್ ಲಾಕ್ ಮಾಡಿಕೊಳ್ಳುವಾಗ ಎಡವಟ್ಟಾಗಿ ಮಂಗಳವಾರ ಮುಂಜಾನೆ ಪುರುಷ ಪ್ರಯಾಣಿಕರೊಬ್ಬರು ಸುಮಾರು 100 ನಿಮಿಷಗಳ ಕಾಲ ಶೌಚಾಲಯದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.

    ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಂಜಿನಿಯರ್‌ಗಳು ಬಾಗಿಲು ಒಡೆದ ಬಳಿಕ ಅವರನ್ನು ರಕ್ಷಿಸಲಾಯಿತು. ಈ ಘಟನೆಯಾದ ನಂತರ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ, ಪ್ರಯಾಣಿಕರು ಶಾಕ್​​​ನಲ್ಲೇ ಇದ್ದರು.

    ಘಟನೆಯ ವಿವರ 
    ಮಂಗಳವಾರ ಮುಂಜಾನೆ 2 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಎಸ್‌ಜಿ-268 ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಕೆಐಎ ಮೂಲಗಳು ತಿಳಿಸಿವೆ. ಪ್ರಯಾಣಿಕರ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ. ಜೊತೆಗೆ ಘಟನೆಯ ಕುರಿತು ಸೈನ್ ಜೆಟ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವರದಿಗಳ ಪ್ರಕಾರ, 14D ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರು ವಿಮಾನ ಟೇಕಾಫ್ ಆದ ಕೂಡಲೇ ಟಾಯ್ಲೆಟ್‌ ಗೆ ಹೋಗಿದ್ದರು. ಅಲ್ಲಿ ಸೀಟ್‌ಬೆಲ್ಟ್​​​ ಸಿಗ್ನಲ್​​​​​ ಆಫ್ ಅದವು ಎಂದು ತಿಳಿದುಬಂದಿದೆ. ಅದೇ ಸಮಯಕ್ಕೆ ದುರದೃಷ್ಟವಶಾತ್, ಶೌಚಾಲಯದ ಬಾಗಿಲು ಸರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಅವರು ಒಳಗೆ ಸಿಕ್ಕಿಹಾಕಿಕೊಂಡರು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊನೆಗೆ ಈ ವಿಚಾರ ಸ್ಪೇಸ್ ಜೆಟ್ ವಿಮಾನದಲ್ಲಿದ್ದ ಸಿಬ್ಬಂದಿಗೆ ತಿಳಿದು ಅವರು ಹೊರಗಿನಿಂದ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ ಶೌಚಾಲಯದ ಬಾಗಿಲನ್ನು ತೆರೆಯಲು ಯಾವುದೇ ಆಯ್ಕೆಯಿಲ್ಲ ಎಂದು ಸಿಬ್ಬಂದಿ ಅರಿತುಕೊಂಡಾಗ, ಗಗನಸಖಿಯೊಬ್ಬರು ಕಂದು ಬಣ್ಣದ ಕಾಗದದ ಮೇಲೆ ದೊಡ್ಡ ಅಕ್ಷರಗಳಲ್ಲಿ “ಸರ್ ನಾವು ಬಾಗಿಲು ತೆರೆಯಲು ಪ್ರಯತ್ನಿಸಿದ್ದೇವೆ, ಆದರೆ ನಮಗೆ ಸಾಧ್ಯವಾಗಲಿಲ್ಲ. ಗಾಬರಿಯಾಗಬೇಡಿ. ಕೆಲವೇ ನಿಮಿಷಗಳಲ್ಲಿ ವಿಮಾನ ಕೆಳಗಿಳಿಯಲಿದೆ, ಆದ್ದರಿಂದ ದಯವಿಟ್ಟು ಕಮೋಡ್ ಮುಚ್ಚಳವನ್ನು ಮುಚ್ಚಿ ಮತ್ತು ಅದರ ಮೇಲೆ ಕುಳಿತುಕೊಳ್ಳಿ, ಸುರಕ್ಷಿತವಾಗಿರಿ. ಮುಖ್ಯ ಬಾಗಿಲು ತೆರೆದ ತಕ್ಷಣ, ಎಂಜಿನಿಯರ್ ಬರುತ್ತಾರೆ.” ಎಂದು ಒಳಗೆ ಸಿಲುಕಿದ್ದ ಪ್ರಯಾಣಿಕನನ್ನು ಸಾಂತ್ವನಗೊಳಿಸಲು ಶೌಚಾಲಯದ ಬಾಗಿಲಿನ ಕೆಳಗಿನಿಂದ ಕಾಗದವನ್ನು ನೂಕಿದರು.

    ಅಂತೂ ಮಂಗಳವಾರ ಮುಂಜಾನೆ 3.42ಕ್ಕೆ ವಿಮಾನವು ಲ್ಯಾಂಡ್​​ ಆಯಿತು. ತಕ್ಷಣ, ಎಂಜಿನಿಯರ್‌ಗಳು ವಿಮಾನವನ್ನು ಹತ್ತಿ, ಬಾಗಿಲು ಒಡೆದು ಎರಡು ಗಂಟೆಗಳ ಕಠಿಣ ಪರಿಶ್ರಮದ ನಂತರ ವ್ಯಕ್ತಿಯನ್ನು ರಕ್ಷಿಸಿದರು. ತಕ್ಷಣ ಪ್ರಯಾಣಿಕನನ್ನು ಪ್ರಥಮ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೂ ಈ ಘಟನೆಯಿಂದ ಪ್ರಯಾಣಿಕ ಸಂಪೂರ್ಣವಾಗಿ ಶಾಕ್​​​ ಆಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

    ಸೈಲೆಂಟ್​ ಕಿಲ್ಲರ್! ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್​, ಈ ರೋಗ ಲಕ್ಷಣ ನಿರ್ಲಕ್ಷಿಸಿದ್ರೆ ಸಾವು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts