ಸುಂಕ ಅಧಿಕಾರ! ಕೋರ್ಟ್​ನಲ್ಲಿ ಟ್ರಂಪ್​ ಸರ್ಕಾರ ವಾದ; ಮೇಲ್ಮನವಿ ವಿಫಲವಾದರೆ ಮುಂದೇನು? ಹೀಗಿದೆ ವರದಿ | Trump Tariffs

ವಿಜಯವಾಣಿ - 2025-05-30T133627.680
Published on

Trump Tariffs: ಕಳೆದ ಕೆಲವು ತಿಂಗಳಷ್ಟೇ ಇತರೆ ದೇಶಗಳ ವಸ್ತುಗಳಿಗೆ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತೀಕಾರದ ಸುಂಕ ಸಮರ ಸಾರಿದ್ದರು. ಇದರಿಂದ ಭಾರತ ಸೇರಿದಂತೆ ಹಲವಾರು ದೇಶಗಳು ಇಕ್ಕಟ್ಟಿಗೆ ಸಿಲುಕಿತ್ತು. ಟ್ರಂಪ್​ ಸುಂಕ ಸುಮರದ ಬೆನ್ನಲ್ಲೇ ಜಾಗತಿಕ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳು, ಷೇರುಪೇಟೆ ಕುಸಿತ ಕಂಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಟ್ಯಾರಿಫ್​ಗೆ ರಿಲೀಫ್​ ಕೊಟ್ಟಿದ್ದ ಟ್ರಂಪ್​ ಸರ್ಕಾರಕ್ಕೆ ಅಮೆರಿಕದ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯ ಭಾರೀ ಮುಖಭಂಗವನ್ನು ಉಂಟುಮಾಡಿದೆ.

ಟ್ರಂಪ್​ ಸರ್ಕಾರ ವಾದ

ಅಧ್ಯಕ್ಷರಿಗೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆರ್ಥಿಕ ನಿರ್ಬಂಧಗಳನ್ನು ವಿಧಿಸುವ ಅಧಿಕಾರವಿದೆಯೇ ಹೊರತು ಸುಖಾಸುಮ್ಮನೇ ಅಲ್ಲ ಎಂದು ಮ್ಯಾನ್‌ಹ್ಯಾಟನ್ ವ್ಯಾಪಾರ ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿತು. ಕೋರ್ಟ್​ನ ಈ ಆದೇಶ ಸದ್ಯ ಟ್ರಂಪ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ವಾದವನ್ನು ಮಂಡಿಸಲಾಗಿದೆ. ಆದಾಗ್ಯೂ, ನ್ಯಾಯಾಲಯವು ಈ ವಿಷಯದಲ್ಲಿ ಅಧ್ಯಕ್ಷರ ಅಧಿಕಾರವನ್ನು ಇದೀಗ ಸೀಮಿತಗೊಳಿಸಿದೆ. ಟ್ರಂಪ್ ವ್ಯಾಪಾರ ನೀತಿಯು ಅವರ ಸ್ವಂತ ಆಲೋಚನೆಗಳಿಗೆ ಅನುಗುಣವಾಗಿರಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲೆ ನ್ಯಾಯಾಲಯ ತೀರ್ಪು ನೀಡಿದೆ.

ವಿಚಾರಣೆ ಆರಂಭದಲ್ಲಿ ಟ್ರಂಪ್ ಅವರ ಸುಂಕಗಳನ್ನು ನಿರ್ಬಂಧಿಸಿದ ಕೋರ್ಟ್​, ಚೀನಾ, ಮೆಕ್ಸಿಕೊ ಮತ್ತು ಕೆನಡಾದ ಮೇಲೆ ಟ್ರಂಪ್ ಆಡಳಿತವು ವಿಧಿಸಿರುವ ವಿಶೇಷ ಸುಂಕಗಳನ್ನು ಸಹ ನಿರ್ಬಂಧಿಸಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಟ್ರಂಪ್ ಆಡಳಿತವು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಸರ್ಕಾರದ ಮೇಲ್ಮನವಿಯನ್ನು ಪರಿಗಣಿಸಿದ ನಂತರ ಉನ್ನತ ನ್ಯಾಯಾಲಯವು ಕೆಳ ನ್ಯಾಯಾಲಯದ ತೀರ್ಪನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಆದಾಗ್ಯೂ, ಅರ್ಜಿಗಳನ್ನು ಮುಂದಿನ ತಿಂಗಳು ಜೂನ್​ 5 ರೊಳಗೆ ಸಲ್ಲಿಸಬೇಕು ಮತ್ತು ಆಡಳಿತವು 9ರಂದು ಪ್ರತಿಕ್ರಿಯಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಟ್ರಂಪ್​​ ಅಧಿಕಾರ

ಟ್ರಂಪ್ ಸುಂಕಗಳನ್ನು ನಿರ್ಬಂಧಿಸುವ ಯುಎಸ್ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಕುಶ್ ದೇಸಾಯಿ, 'ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ನ್ಯಾಯಾಧೀಶರು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಯುಎಸ್ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯದ ಮೂಲ ತೀರ್ಪನ್ನು ಜಾರಿಗೆ ತಂದಿದ್ದರೆ ಪರಿಣಾಮಗಳು ವಿಭಿನ್ನವಾಗಿರುತ್ತಿದ್ದವು. ಟ್ರಂಪ್ ಆಡಳಿತವು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ವಿಫಲವಾಗಿದ್ದರೆ, ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಸಂಸ್ಥೆ ತನ್ನ ಅಧಿಕಾರಿಗಳಿಗೆ ಆ ಆದೇಶಗಳನ್ನು ಪಾಲಿಸುವಂತೆ ಹೇಳುತ್ತಿತ್ತು. ಆದಾಗ್ಯೂ, ಉನ್ನತ ನ್ಯಾಯಾಲಯವು ಟ್ರಂಪ್ ಪರವಾಗಿ ತೀರ್ಪು ನೀಡಿದೆ. ಕೋರ್ಟ್,​ ಯುಎಸ್ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು.

ಸುಂಕಗಳಿಗೆ ಒಳಪಟ್ಟ ವ್ಯಾಪಾರಿಗಳು ಬಡ್ಡಿಯೊಂದಿಗೆ ಇಲ್ಲಿಯವರೆಗೆ ಪಾವತಿಸಿದ ಮೊತ್ತದ ಮರುಪಾವತಿಯನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಪ್ರಸ್ತುತ ಸುಂಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ವಾಣಿಜ್ಯ ನ್ಯಾಯಾಲಯದ ತೀರ್ಪು ಜಾರಿಗೆ ಬಂದಿದ್ದರೂ ಸಹ, ಉಕ್ಕು ಮತ್ತು ಅಲ್ಯೂಮಿನಿಯಂ ಸುಂಕಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಉಕ್ಕು ಮತ್ತು ಅಲ್ಯೂಮಿನಿಯಂ ಸುಂಕಗಳು ಟ್ರಂಪ್ ತೆಗೆದುಕೊಂಡ ತುರ್ತು ಕ್ರಮಗಳಿಗಿಂತ ಭಿನ್ನವಾದ ಕಾನೂನಿನ ಅಡಿಯಲ್ಲಿ ಬರುತ್ತವೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net