ನೈಜ ಘಟನೆಯಾಧಾರಿತ ಸೇನಾಪುರ ; ಸಿನಿಮಾ ಆಗಿದೆ ಕರಾವಳಿ, ಮಲೆನಾಡ ಸತ್ಯ ಘಟನೆ

Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ ‘ಸೇನಾಪುರ’. ಇತ್ತೀಚೆಗಷ್ಟೆ ಗುರು ಸಾವನ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತರಾದ ರಂಗನಾಥ್ ಭಾರದ್ವಾಜ್ ಮತ್ತು ನಟಿ ಪ್ರಿಯಾ ಹಾಸನ್ ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕ ಗುರು ಸಾವನ್, ‘‘ಸೇನಾಪುರ’ ಮೊದಲು ಸಿನಿಮಾ ಬದಲು ವೆಬ್‌ಸಿರೀಸ್ ಮಾಡಬೇಕು ಎಂದುಕೊಂಡಿದ್ದೆ. ಕುಂದಾಪುರ ಮತ್ತು ಕರಾವಳಿ ಭಾಗದಲ್ಲಿ ನಡೆದ ಕೆಲ ನೈಜ ಘಟನೆಯನ್ನು ಇಟ್ಟುಕೊಂಡ ಸಿನಿಮಾ ಮಾಡಿದ್ದೇವೆ. ಸಿನಿಮಾ ಕೂಡ ನೈಜತೆಗೆ ಹತ್ತಿರವಾಗಿದೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು. ಅಕ್ರಮ ಗಣೆಗಾರಿಕೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಅಕ್ರಮ ಗಣಿಗಾರಿಕೆ ಸುತ್ತ ನಡೆದ ನೈಜ ಅಂಶಗಳು ‘ಸೇನಾಪುರ’ ಚಿತ್ರದಲ್ಲಿವೆ.

ಈ ಮಹಿಳಾ ಪ್ರಧಾನ ಕಥೆಯಲ್ಲಿ ಅರಣ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ಪಾತ್ರದಲ್ಲಿ ನಟಿಸಿರುವ ಗಾಯಕಿ ಅನನ್ಯ ಭಟ್, ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಉಳಿದಂತೆ ದಿನೇಶ್ ಮಂಗಳೂರು, ಬಿ.ಎಂ. ಗಿರಿರಾಜ್, ಸಿಂಧೂ, ಶೇಖರ್ ರಾಜ್, ರೀನಾ, ಅಮೂಲ್ಯ, ಪರಮೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಅರ್ಜುನ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net