‘ಕಾಂತಾರ 2’ ಶೂಟಿಂಗ್ ಡೇಟ್ ಫಿಕ್ಸ್, ಸಿನಿಮಾ ಬಜೆಟ್‌ ಬಗ್ಗೆ ರಿಷಬ್‌ ಶೆಟ್ಟಿ ಮಾತು..!

kkk
Published on

ಕಾಂತಾರ ಸಿನಿಮಾ ಮೂಲಕ ಅಚ್ಚಳಿಯದ ಗುರುತಾಗಿ ಉಳಿದಿರುವ ರಿಷಬ್‌ ಶೆಟ್ಟಿ ಸದ್ಯ ‘ಕಾಂತಾರ 2’ ಸಿನಿಮಾ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿದೆ.


ಈ ಸಿನಿಮಾಗಾಗಿ ರಿಷಬ್‌ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಕಾಂತಾರ ಸಿನಿಮಾಗಿಂತ ‘ಕಾಂತಾರ 2’ ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಹೌದು ಕಾಂತಾರ ಸಿನಿಮಾ ಬರೀ ರಿಷಬ್‌ ಶೆಟ್ಟಿ ಅವರ ಊರಿನಲ್ಲಿ ಮಾತ್ರ ಶೂಟಿಂಗ್‌ ನಡೆದಿತ್ತು. ಆದರೆ ಈ ‘ಕಾಂತಾರ 2’ ಚಿತ್ರದಲ್ಲಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಕೂಡ ನಡೀತಾಯಿದೆ ಎನ್ನಲಾಗುತ್ತಿದೆ.


ರಿಷಬ್‌ ಸಿನಿಮಾದ ಬಜೆಟ್ ಕುರಿತಾಗಿಯೂ ಮಾತನಾಡಿದ್ದು, "ಕಥೆಗೆ ತಕ್ಕಂತೆ ಬಜೆಟ್ ಇರಲಿದೆ" ಎಂದಿದ್ದಾರೆ. ಇದಲ್ಲದೇ ಕಾಂತಾರ ಸಿನಿಮಾದ ಬಜೆಟ್ ಗಿಂತ ಹೆಚ್ಚು ಬಜೆಟ್‌ನಲ್ಲಿ ತಯಾರಾಗುವ ಸಿನಿಮಾ ಇದಾಗಲಿದೆ ಎಂದು ಈ ಹಿಂದೆ ರಾಜ್ ಬಿ ಶೆಟ್ಟಿ ಬಾಯ್ಬಿಟ್ಟಿದ್ದರು. ಅಲ್ಲದೇ ಇದು ನೂರು ಕೋಟಿ ಬೇಡುವಂತಹ ಸಿನಿಮಾ ಎಂದು ಹೇಳಿದ್ದರು.


ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ ಹೋಗಲಿದ್ದೇವೆ..ಸದ್ಯ ನಾನು ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ" ಎಂದಿದ್ದಾರೆ ನಟ ರಿಷಬ್ ಶೆಟ್ಟಿ


ಇದರ ಜೊತೆಗೆ ಚಾರ್ಲಿ ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ಚಾರ್ಲಿ 2 ಸಿನಿಮಾ ಬರುವುದಕ್ಕೆ ಸಾಧ್ಯವೇ ಇಲ್ಲ. ನಿರ್ದೇಶಕರು ಬೇರೆ ಕಥೆಯಲ್ಲಿ ಮಗ್ನರಾಗಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net