ಗೆಳತಿಯನ್ನೇ ಹತ್ಯಗೈದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಕಾಡಿಗೆ ಬಿಸಾಕಿದ ಸ್ನೇಹಿತ!

kerala murder
Published on

ತ್ರಿಸ್ಸೂರ್​: 26 ವರ್ಷದ ಮಹಿಳೆಯನ್ನು ಸ್ನೇಹಿತನೇ ಕೊಲೆ ಮಾಡಿ, ಶವವನ್ನು ಕಾಡಿನಲ್ಲಿ ಬಿಸಾಕಿರುವ ಘಟನೆ ಕೇರಳದಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಘಟನೆಯು ನಡೆದಿದೆ ಎನ್ನಲಾಗಿದ್ದು, ಮಹಿಳೆಯ ಶವ ತ್ರಿಸ್ಸೂರ್ ಜಿಲ್ಲೆಯ ಚಾಲಾಕುಡಿಯ ತುಂಬುರ್ ಮೂಜಿ ಕಾಡಿನಲ್ಲಿ ದೊರೆತಿದೆ.

ಮಹಿಳೆಯನ್ನು ಅಥಿರಾ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತನಾದ ಅಖಿಲ್ ಗೆ ಸಾಲವನ್ನು ನೀಡಿದ್ದಳು. ಅಲ್ಲದೆ, ಅಖಿಲ್ ಈ ಹಣವನ್ನು ಕಂತಿನ ರೂಪದಲ್ಲಿ ಮರುಳಿಸುತ್ತಿದ್ದ ಎನ್ನಲಾಗಿದೆ. ಈ ನಡುವೆ ಅಥಿರಾ ಯಾವಾಗ ಹಣವನ್ನು ಒಮ್ಮೆಲೇ ನೀಡುವಂತೆ ದುಂಬಾಲು ಬಿದ್ದಳೋ, ಹಣವನ್ನು ಹಿಂದಿರುಗಿಸಲಾಗದ ಕಾರಣದಿಂದ ಅಖಿಲ್ ಈ ಕೊಲೆಯನ್ನು ಮಾಡಿದ್ದಾನೆ ಎನ್ನಲಾಗಿದೆ.

ಸ್ಥಳೀಯ ಪತ್ರಿಕೆಯೊಂದರ ಪ್ರಕಾರ, ಅಥಿರಾಳ ಗಂಡ ಸನಿಲ್ ತನ್ನ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ಕಾಲಡಿ ಪೊಲೀಸ್ ಸ್ಟೇಷನ್ ನಲ್ಲಿ ದೂರನ್ನು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯ ಜಾಡು ಹಿಡಿದು ಹೊರಟಾಗ ಅಥಿರಾಳ ಮೊಬೈಲ್ ನ ಲಾಸ್ಟ್ ಲೊಕೇಶನ್ ಟ್ರಾಕ್ ಮಾಡಿದ್ದಾರೆ. ಈ ವೇಳೆ ಲಾಸ್ಟ್ ಲೊಕೇಶನ್ ತುಂಬುರ್ ಮೂಜಿ ಕಾಡಿನ ಹತ್ತಿರ ದೊರೆತಿದ್ದು, ಅಖಿಲ್ ನ ಜೊತೆ ಇದ್ದುದು ತಿಳಿದು ಬಂದಿದೆ. ಅಖಿಲ್ ನನ್ನ ವಶಪಡಿಸಿಕೊಂಡು , ವಿಚಾರಣೆಗೆ ಒಳಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪೋಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಅಖಿಲ್ ''ಸಾಲವನ್ನು ಹಿಂದಿರುಗಿಸಲಾಗದ ಕಾರಣದಿಂದಾಗ ತನ್ನ ಸ್ನೇಹಿತೆಯು ಧರಿಸಿದ್ದ ಶಾಲನ್ನು ಬಳಸಿ ಕತ್ತು ಹಿಸುಕಿ ಕೊಲೆಮಾಡಿದ್ದಾನೆ. ತದನಂತರ ದಿಕ್ಕುತೋಚದಂತಾಗಿದ್ದ ಅಖಿಲ್ ಹೆಣವನ್ನು ಕಾಡಿನಲ್ಲಿ ಬಿಸಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಪೋಲೀಸರ ತಂಡ ಆರೋಪಿಯ ಸಹಾಯದಿಂದ ಅಥಿರಾಳ ಶವವನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net