More

    ಅವರ ಮಾತನ್ನು ಕೇಳಿದ್ರೆ ರಕ್ತ ಕುದಿಯುತ್ತದೆ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಆಕ್ರೋಶ

    ಮಂಡ್ಯ: ಈ ತುಂಬು ಸಭೆಯಲ್ಲಿ ಕೇಳುತ್ತೇನೆ, ಕೆಲವರು ಜೆಡಿಎಸ್ ಮುಗಿದೇ ಹೋಯ್ತು ಅಂತ ಹೇಳುತ್ತಾರೆ. ಈ ರೀತಿ ಹೇಳುವವರು ಎಲ್ಲಿಂದ ಬಂದವರು? ಈ ಮಾತುಗಳನ್ನು ಎಚ್ಚರಿಕೆಯಿಂದ ಆಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯ ವಿರೋಧಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದರು.

    ಇಂದು ಮಂಡ್ಯದ ಕೆ.ಆರ್​. ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್​.ಟಿ ಮಂಜು ಪರ ಭರ್ಜರಿ ಪ್ರಚಾರ ಮಾಡಿದ ಎಚ್​ಡಿಡಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಇದನ್ನೂ ಓದಿ: 68ನೇ ವಯಸ್ಸಿನಲ್ಲಿ ಮದ್ವೆ ಆಸೆಗೆ ಬಿದ್ದ ವೃದ್ಧನಿಗೆ ಶಾಕ್​! ತನಿಖೆ ವೇಳೆ ಕಿಲಾಡಿ ಲೇಡಿಯ ಕರಾಳತೆ ಬಯಲು

    ನಾನೇ ಬರಬೇಕಾಯ್ತು

    ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದ ಎಚ್​ಡಿಡಿ, 1982ರಲ್ಲಿ ಕೆ.ಆರ್. ಪೇಟೆಯ ಕೆರೆ ಹೊಡೆದು ಹೋಗಿತ್ತು. ಬೆಳೆದ ಫಸಲುಗಳು ಮಣ್ಣು ಪಾಲಾಗಿ ಹೋಯಿತು. ರಾತ್ರಿ 8 ಗಂಟೆಗೆ ನಾನು ದೆಹಲಿಯಿಂದ ಓಡೋಡಿ ಬಂದೆ. ಕೆ.ಆರ್ ಪೇಟೆಯಲ್ಲಿ ಒಂದು ಸೇತುವೆ ಕಟ್ಟೋಕೆ ನಾನೇ ಬರಬೇಕಾಯ್ತು ಎಂದು ಹೆಸರು ಪ್ರಸ್ತಾಪಿಸಿದೆ ಬಿ.ಎಸ್. ಯಡಿಯೂರಪ್ಪ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ನನ್ನ ರಕ್ತ ಕುದಿಯುತ್ತದೆ

    ಕೆ.ಆರ್ ಪೇಟೆಗೆ ಬಂದು ಒಬ್ಬ ಮಹಾನ್ ವ್ಯಕ್ತಿ ಒಂದು ಮಾತು ಹೇಳ್ತಾರೆ, ಜೆಡಿಎಸ್​ನ ನಾನು ಮುಗಿಸಿ ಬಿಟ್ಟೆ ಎನ್ನುತ್ತಾರೆ. ಅವರ ಮಾತನ್ನು ಕೇಳಿದರೆ ನನ್ನ ರಕ್ತ ಕುದಿಯುತ್ತದೆ. ತುಂಬು ಸಭೆಯಲ್ಲಿ ಕೇಳುತ್ತೇನೆ, ಕೆಲವರು ಜೆಡಿಎಸ್ ಮುಗಿದೆ ಹೋಯ್ತು ಅಂತಾರೆ. ಆ ರೀತಿ ಹೇಳುವವರು ಎಲ್ಲಿಂದ ಬಂದರು? ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವಂತೆ ದೇವೇಗೌಡರು ಖಡಕ್ ವಾರ್ನಿಂಗ್ ನೀಡಿದರು.

    ಇದನ್ನೂ ಓದಿ: ಮಕ್ಕಳ ಪರೀಕ್ಷೆ ಬಗ್ಗೆ ಮೋದಿಗೆ ಕಾಳಜಿ, ಅವರ ಸೂಚನೆಯಂತೆ ರೋಡ್ ಶೋನಲ್ಲಿ‌ ಬದಲಾವಣೆ: ಶೋಭಾ ಕರಂದ್ಲಾಜೆ

    ನಾನು 90ನೇ ವಯಸ್ಸಿನಲ್ಲಿ ಹೋರಾಟ ಮಾಡ್ತಿದ್ದೀನಿ. ಮೇ 10ಕ್ಕೆ ಚುನಾವಣೆ ಇದೆ. ಈ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೆಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇಬೇಕು ಎಂದು ಕರೆ ನೀಡಿದರು.

    ನಾನು ಕಾಶ್ಮೀರಕ್ಕೆ ನಾಲ್ಕು ಬಾರಿ ಹೋದೆ. ಯಾವ ಮುಸ್ಲಿಮರು ನನ್ನನ್ನು ಹೊಡೆಯಲಿಲ್ಲ. ಪ್ರೀತಿಯಿಂದ ಮುಸಲ್ಮಾನ್ ಬಂಧುಗಳ ವಿಶ್ವಾಸಗಳಿಸಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್​ಡಿಡಿ ಕುಟುಕಿದರು. (ದಿಗ್ವಿಜಯ ನ್ಯೂಸ್​)

    ಟರ್ಕಿ ಶೃಂಗಸಭೆಯಲ್ಲಿ ರಷ್ಯಾದ ಪ್ರತಿನಿಧಿಗೆ ಹೊಡೆದ ಉಕ್ರೇನಿಯನ್​ ಸಂಸದ; ವಿಡಿಯೋ ವೈರಲ್​

    VIDEO| ಬೈಕ್​​ ಮೇಲೆ ಕುಳಿತು ಪರಸ್ಪರ ಅಪ್ಪಿಕೊಂಡು ಲಿಪ್​ಲಾಕ್​ ​​ಮಾಡಿದ ಹುಡುಗಿಯರು!

    ಮಕ್ಕಳ ಪರೀಕ್ಷೆ ಬಗ್ಗೆ ಮೋದಿಗೆ ಕಾಳಜಿ, ಅವರ ಸೂಚನೆಯಂತೆ ರೋಡ್ ಶೋನಲ್ಲಿ‌ ಬದಲಾವಣೆ: ಶೋಭಾ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts