More

    ಮಕ್ಕಳ ಪರೀಕ್ಷೆ ಬಗ್ಗೆ ಮೋದಿಗೆ ಕಾಳಜಿ, ಅವರ ಸೂಚನೆಯಂತೆ ರೋಡ್ ಶೋನಲ್ಲಿ‌ ಬದಲಾವಣೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ 6, 7 ಕ್ಕೆ ನಿಗದಿಯಾಗಿದ್ದು, ಎಲ್ಲ ತಯಾರಿ ನಡೆದಿದೆ ಮತ್ತು ಕಾರ್ಯಕರ್ತರಿಗೆ ಮಾಹಿತಿ ಕೊಟ್ಟಿದ್ದೇವೆ. ಆದರೆ ಭಾನುವಾರ ನೀಟ್ ಪರೀಕ್ಷೆ ಇರುವ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದೆವು. ಅವರಿಗೆ ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿಯುಳ್ಳವರು, ಪರಿಕ್ಷಾಪೇ ಚರ್ಚಾ ನಡೆಸಿದ್ದಾರೆ. ರೋಡ್ ಶೋ ನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಎಂದು ಹೇಳಿ ಅವರು ನೀಡಿದ ಸೂಚನೆಯಂತೆ ರೋಡ್ ಶೋ ನಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಕೇಂದ್ರ ಸಚಿವೆ, ರಾಜ್ಯ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಹೇಳಿದರು.

    ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು ಮಕ್ಕಳ ಭವಿಷ್ಯ, ನೀಟ್ ಪರೀಕ್ಷೆಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಪ್ರಧಾನಿ ಅಪೇಕ್ಷೆಯಂತೆ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅದಲು ಬದಲಾಗಿವೆ. ಶನಿವಾರ 26.5 ಕಿ.ಮೀ ದೂರದ ದೊಡ್ಡ ರೋಡ್ ಶೋ ಇರಲಿದೆ. ಭಾನುವಾರ ಚಿಕ್ಕ ರೋಡ್ ಶೋ ಗೊತ್ತುಪಡಿಸಲಾಗಿದೆ. ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ. ಭಾನುವಾರ ರೋಡ್ ಶೋ ಮಾರ್ಗದಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ನೀಡಲಿದ್ದು, ಸಹಕರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

    ಇದನ್ನೂ ಓದಿ: ಬಜರಂಗದಳ ನಿಷೇಧಿಸುವುದಕ್ಕೆ ಸಾಧ್ಯವಿಲ್ಲ: ಶಾಸಕ ಅರವಿಂದ ಲಿಂಬಾವಳಿ ಹೇಳಿಕೆ

    ಕಾಂಗ್ರೆಸ್ ಸಂಚು

    ಮೋದಿಯವರ ರೋಡ್ ಶೋ ವೇಳೆ ಕಾಂಗ್ರೆಸ್ ನವರು ಷಢ್ಯಂತ್ರ ಹೆಣೆದಿದ್ದಾರೆ. ರೋಡ್ ಶೋ ಸಂದರ್ಭದಲ್ಲಿ ಆಂಬುಲೆನ್ಸ್ ಗಳನ್ನು ರಸ್ತೆಗೆ ತರಲು ಕಾಂಗ್ರೆಸ್ ಸಂಚು ಹೂಡಿದೆ ಎಂದು ಶೋಭಾ‌ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.

    ಯಾವುದೇ ಆಂಬುಲೆನ್ಸ್​ಗೂ ಭಂಗ ಉಂಟಾಗದಂತೆ ರೋಡ್ ಶೋ ಸಾಗಲು ಹೋಗಲು ಅವಕಾಶವಿದೆ. ಆದರೆ ಆಂಬುಲೆನ್ಸ್​ಗಳಲ್ಲಿ ರೋಗಿ ಇದ್ದಾರೆಯೆ? ಇಲ್ಲವೆ ಎಂದು ತಪಾಸಣೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ಮೋದಿ ರೋಡ್ ಶೋಗೆ ಲಭಿಸಿದ ಜನಸ್ಪಂದನೆಯಿಂದ ಕಾಂಗ್ರೆಸ್ ದಿಗಿಲುಗೊಂಡು ಅಪಪ್ರಚಾರ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

    ಆರ್​ಎಂಸಿ ಯಾರ್ಡ್​ನಲ್ಲಿ ಕೆ.ಗೋಪಾಲಯ್ಯ ಪ್ರಚಾರ

    ಕಾಂಗ್ರೆಸ್​ಗೆ ಅಧಿಕಾರ ಖಚಿತ: ದಾಸರಹಳ್ಳಿ ಧನಂಜಯ ಗೌಡ ವಿಶ್ವಾಸ, ಭರ್ಜರಿ ಪ್ರಚಾರ

    ಯಶವಂತಪುರ ನಂ.1 ಕ್ಷೇತ್ರವಾಗಿಸುವೆ: ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts