More

    ಬಜರಂಗದಳ ನಿಷೇಧಿಸುವುದಕ್ಕೆ ಸಾಧ್ಯವಿಲ್ಲ: ಶಾಸಕ ಅರವಿಂದ ಲಿಂಬಾವಳಿ ಹೇಳಿಕೆ

    ಮಹದೇವಪುರ: ಮತ್ತೊಬ್ಬ ರಾವಣ ಹುಟ್ಟಿ ಬಂದರೂ ಬಜರಂಗದಳವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಮಹದೇವಪುರ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಪತ್ನಿ ಮಂಜುಳಾ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು.

    ಬಜರಂಗದಳವನ್ನು ನಿಷೇಧ ಮಾಡುವುದಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಅಪಾರ ಸಂಖ್ಯೆಯ ಹನುಮಂತ ಭಕ್ತರನ್ನು ಒಳಗೊಂಡಿರುವ ಬಜರಂಗದಳದವರನ್ನು ಇದು ಕೆರಳಿಸಿದೆ. ಬಜರಂಗದಳವನ್ನು ನಿರ್ಬಂಧಿಸಲು ಕಾಂಗ್ರೆಸ್ ಅಲ್ಲ, ಮತ್ತೊಬ್ಬ ರಾವಣ ಹುಟ್ಟಿ ಬಂದರೂ ಸಾಧ್ಯವಿಲ್ಲ ಎಂದು ಗುಡುಗಿದರು.

    ಇದನ್ನೂ ಓದಿ: ಸಪ್ತಗಿರಿಗೌಡಗೆ ತಾರಾ ಸಾಥ್! ಗಾಂಧಿನಗರ ಕ್ಷೇತ್ರದ ವಿವಿಧೆಡೆ ಭರ್ಜರಿ ಮತಯಾಚನೆ

    ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಅಭಿವೃದ್ಧಿಗೆ ನಮ್ಮ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಕಾಂಗ್ರೆಸ್​ನವರು ಹನುಮ ಭಕ್ತರನ್ನು ಭಯೋತ್ಪಾದಕರಂತೆ ಕಾಣುತ್ತಿರುವುದು ವಿಪರ್ಯಾಸವೆಂದರು.

    ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಮಾತನಾಡಿ, ಕ್ಷೇತ್ರದ ಎಲ್ಲ ಬಡವರಿಗೂ ಸ್ವಂತ ಸೂರು ಕಲ್ಪಿಸಲು ಪಣತೊಟ್ಟಿದ್ದೇವೆ. ಕ್ಷೇತ್ರದಲ್ಲಿನ ಬಡವರಿಗೆ 2,750 ಮನೆ ವಿತರಣೆ, 4,072 ಮಂದಿಗೆ ಹಕ್ಕುಪತ್ರ ವಿತರಿಸುವ ಮೂಲಕ ನಮ್ಮ ಪತಿ ಅರವಿಂದ ಲಿಂಬಾವಳಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮುಂದುವರಿಯಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

    ನಾನು-ಪತಿ ಡಬಲ್ ಇಂಜಿನ್​ನಂತೆ ಸೇವೆ ಸಲ್ಲಿಸುತ್ತೇವೆ: ಮಂಜುಳಾ ಅರವಿಂದ ಲಿಂಬಾವಳಿ ಭರ್ಜರಿ ಪ್ರಚಾರ

    ಅಭಿವೃದ್ಧಿಗಾಗಿ ಕಮಲಕ್ಕೆ ಮತ ಚಲಾಯಿಸಿ: ಮತದಾರರಿಗೆ ಮಹದೇವಪುರ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಮನವಿ

    ಪ್ರಗತಿಯಲ್ಲಿ ಕ್ರೀಡಾಂಗಣಗಳ ಕಾಮಗಾರಿ: ಮಹದೇವಪುರ ಅಭಿವೃದ್ಧಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts